alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದ್ರೆ ಸಿಗುತ್ತೆ 144 ಮೊಟ್ಟೆ

ಸರಿಯಾದ ಸಮಯಕ್ಕೆ ಕಚೇರಿಗೆ ಬಂದು ಅತ್ಯುತ್ತಮ ಕೆಲಸ ಮಾಡುವ ಉದ್ಯೋಗಿಗಳಿಗೆ ಅನೇಕ ಕಂಪನಿಗಳು ಪ್ರೋತ್ಸಾಹ ರೂಪದಲ್ಲಿ ಬೋನಸ್ ನೀಡುತ್ತದೆ. ಇಲ್ಲವೆ ಸಂಬಳವನ್ನು ಹೆಚ್ಚು ಮಾಡುತ್ವೆ. ಆದ್ರೆ ವೆನೆಜುವೆಲಾದ ಕಂಪನಿಯೊಂದು ಭಿನ್ನ ರೀತಿಯಲ್ಲಿ ಕಾರ್ಮಿಕರನ್ನು ಪ್ರೋತ್ಸಾಹಿಸುತ್ತಿದೆ.

ವೆನೆಜುವೆಲಾದ ಭದ್ರತಾ ಕಂಪನಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವ ಉದ್ಯೋಗಿಗಳಿಗೆ ಪ್ರತಿ ತಿಂಗಳು 144 ಮೊಟ್ಟೆಗಳನ್ನು ನೀಡುತ್ತಿದೆ. ಇಲ್ಲಿನ ಕಾರ್ಮಿಕರು ಪ್ರತಿ ತಿಂಗಳು 10 ಡಾಲರ್ ( ಸುಮಾರು 640 ರೂಪಾಯಿ) ಸಂಬಳ ಪಡೆಯುತ್ತಾರೆ.

ವೆನೆಜುವೆಲಾ ಜನರು ಹಣದುಬ್ಬರಕ್ಕೆ ತುತ್ತಾಗಿದ್ದಾರೆ. ಇದ್ರಿಂದಾಗಿ ಇಲ್ಲಿನ ಡಾಲರ್ ಬೆಲೆ ಶೇಕಡಾ 90ರಷ್ಟು ಕುಸಿದಿದೆ. ಇದ್ರಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಅಟ್ಲಾಸ್ ಸೆಕ್ಯೂರಿಟಿ ಹೆಸರಿನ ಸಂಸ್ಥೆ ಸಿಬ್ಬಂದಿಗೆ ಮೊಟ್ಟೆ ನೀಡ್ತಿದೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಂದು ಸರಿಯಾಗಿ ಕೆಲಸ ಮಾಡುವವರಿಗೆ ಮಾತ್ರ ಮೊಟ್ಟೆ ಸಿಗಲಿದೆ.

ಆರ್ಥಿಕ ಮುಗ್ಗಟ್ಟಿನಿಂದಾಗಿ ದಿನಬಳಕೆ ವಸ್ತುಗಳ ಖರೀದಿ ಕೂಡ ಸಾಧ್ಯವಾಗ್ತಿಲ್ಲ. ಅನೇಕರು ಉಪವಾಸ ಸಾಯುತ್ತಿದ್ದಾರೆ. ಬಹುತೇಕ ಸೂಪರ್ ಮಾರ್ಕೆಟ್ ಗಳು ಬಾಗಿಲು ಮುಚ್ಚಿವೆ. ಬಾರಿ ಹಣ ನೀಡಿ ಹಾಲಿನ ಬಾಟಲಿ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಮೊಟ್ಟೆ ನೀಡಿದ್ರೆ ಒಳ್ಳೆಯದು ಎನ್ನುವ ಕಾರಣಕ್ಕೆ ಕಂಪನಿ ಮೊಟ್ಟೆ ನೀಡ್ತಿದೆ. ಮೊಟ್ಟೆ ಜಾಹೀರಾತಿ ನೋಡಿಯೇ ಅನೇಕರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...