alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಮತ್ತೆ ದಾಳಿ: ಓರ್ವ ಸಾವು

london

ಲಂಡನ್ ನಲ್ಲಿ ಇಂದು ಬೆಳಗ್ಗೆ ಮತ್ತೆ ಅಟ್ಟಹಾಸ ಮೆರೆಯಲಾಗಿದೆ. ಮಸೀದಿ ಬಳಿ ವಾಹನವೊಂದನ್ನು ಪಾದಚಾರಿಗಳ ಮೇಲೆ ನುಗ್ಗಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಇದೊಂದು ಉದ್ದೇಶಿತ ಭಯೋತ್ಪಾದಕ ಕೃತ್ಯ ಅಂತಾ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅಭಿಪ್ರಾಯಪಟ್ಟಿದ್ದಾರೆ. ತುರ್ತು ಸಭೆಯನ್ನು ಕೂಡ ಕರೆದಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದಾರೆ.

ಮಸೀದಿಯಲ್ಲಿ ಪ್ರಾರ್ಥನೆಗಾಗಿ ಬಂದಿದ್ದವರನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ನಡೆಸಲಾಗಿದೆ. ವಾಹನದ ಚಾಲಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆ ಕೂಡ ಎರಡು ಬಾರಿ ಇಂಥದ್ದೇ ದಾಳಿ ನಡೆದಿದೆ.

ಲಂಡನ್ ನ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಬಳಿ ಉಗ್ರರು ದುಷ್ಕೃತ್ಯ ಎಸಗಿದ್ದು, ಹಲವರನ್ನು ಬಲಿಪಡೆದಿದ್ದರು. ಇವತ್ತು ಬೆಳಗ್ಗೆ ಕೂಡ ಉದ್ದೇಶಪೂರ್ವಕವಾಗಿಯೇ ಉಗ್ರ ಪಾದಚಾರಿಗಳ ಮೇಲೆ ವಾಹನ ಹರಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...