alex Certify
ಕನ್ನಡ ದುನಿಯಾ       Mobile App
       

Kannada Duniya

ಜಮೈಕಾದಲ್ಲಿ ಮುಂಬೈ ಯುವಕನ ಹತ್ಯೆ

kill

ಮುಂಬೈ ಯುವಕನೊಬ್ಬನನ್ನು ಜಮೈಕಾದ ಕಿಂಗ್ ಸ್ಟನ್ ನಲ್ಲಿ ಅಪರಿಚಿತ ದರೋಡೆಕೋರರು ಹತ್ಯೆ ಮಾಡಿದ್ದಾರೆ. ಆತನ ಇನ್ನಿಬ್ಬರು ಸ್ನೇಹಿತರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಹತ್ಯೆಯಾದ 25 ವರ್ಷದ ಯುವಕ ರಾಕೇಶ್ ತಲ್ರೇಜಾ ಕೆರಿಬಿಯನ್ ಜ್ಯುವೆಲರ್ಸ್ ನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ. ಆತನ ಪೋಷಕರು ಮುಂಬೈನ ವಸೈನಲ್ಲಿ ವಾಸವಾಗಿದ್ದಾರೆ.

ಗುರುವಾರ ರಾತ್ರಿ 7 ಗಂಟೆಗೆ ರಾಕೇಶ್ ಹತ್ಯೆಯಾಗಿರೋದಾಗಿ ಆತನ ಸಹೋದ್ಯೋಗಿ ಕರೆ ಮಾಡಿ ತಿಳಿಸಿದ್ದಾನೆ. ಸಂಗ್ರಹವಾದ ಹಣವನ್ನೆಲ್ಲ ಅಂಗಡಿಯಲ್ಲಿಟ್ಟುಕೊಂಡ್ರೆ ಲೂಟಿಯಾಗಬಹುದು ಅನ್ನೋ ಕಾರಣಕ್ಕೆ ಕೆರಿಬಿಯನ್ ಜ್ಯುವೆಲರ್ಸ್ ಮಾಲೀಕ ಸ್ವಲ್ಪ ಸ್ವಲ್ಪ ಹಣವನ್ನು ನೌಕರರ ಕೈಯಲ್ಲಿ ಕೊಟ್ಟು ಕಳಿಸುತ್ತಿದ್ದ.

ಈ ವಿಷಯ ತಿಳಿದ ಯಾರೋ ಹಣಕ್ಕಾಗಿ ರಾಕೇಶ್ ನನ್ನು ಹತ್ಯೆ ಮಾಡಿದ್ದಾರೆ. ಚೆರ್ರಿ ಗಾರ್ಡನ್ಸ್ ನಲ್ಲಿದ್ದ ರಾಕೇಶ್ ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರು ಗನ್ ಹಿಡಿದು ಬೆದರಿಸಿ ಎಲ್ಲರ ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡಿದ್ದಾರೆ. ರಾಕೇಶ್ ಪ್ರತಿರೋಧ ವ್ಯಕ್ತಪಡಿಸಿದ್ರಿಂದ ಆತನ ಮೇಲೆ ದುಷ್ಕರ್ಮಿಗಳು 3 ಗುಂಡು ಹಾರಿಸಿದ್ದಾರೆ, ಇನ್ನಿಬ್ಬರ ಕಾಲಿಗೂ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಕೆಲಸಕ್ಕಾಗಿ ಜಮೈಕಾಗೆ ತೆರಳಿದ್ದ ರಾಕೇಶ್ ಒಮ್ಮೆಯೂ ತವರಿಗೆ ಬಂದಿರಲಿಲ್ಲ. ಪ್ರತಿ ಭಾನುವಾರ ಹೆತ್ತವರಿಗೆ ಕರೆ ಮಾಡಿ ಮಾತನಾಡ್ತಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...