alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

VAN PLANEಹಾಂಗ್ ಕಾಂಗ್ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಜೆಟ್ ವಿಮಾನವೊಂದು ನಿಲ್ದಾಣ ನಿರ್ವಹಣಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ವಿಶ್ವದ ಬ್ಯುಸಿಯೆಸ್ಟ್ ಏರ್ ಪೋರ್ಟ್ ಗಳಲ್ಲಿ ಹಾಂಗ್ ಕಾಂಗ್ ನಿಲ್ದಾಣವೂ ಒಂದು.

ಡ್ರಾಗೊನೇರ್ ಏರ್ ಬಸ್ ಎ330ಯ ಕೆಎ691 ವಿಮಾನ ಮಲೇಷಿಯಾದ ಪೆನಾಂಗ್ ಗೆ ಹೊರಟಿತ್ತು. ವಿಮಾನ ನಿಲ್ದಾಣದಿಂದ ಹೊರಡಲು ಸಜ್ಜಾಗುತ್ತಿತ್ತು. ರನ್ ವೇನತ್ತ ನಿಧಾನವಾಗಿ ಸಾಗುತ್ತಿತ್ತು. ಆ ಸಮಯದಲ್ಲಿ ಎದುರಿನಿಂದ ಬಂದ ವಿಮಾನ ನಿಲ್ದಾಣ ನಿರ್ವಹಣಾ ವಾಹನ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ವಾಹನದ ಮುಂಭಾಗ ವಿಮಾನಕ್ಕೆ ಸಿಕ್ಕಿಹಾಕಿಕೊಂಡಿತ್ತು.

ವಿಮಾನ ಸುಮಾರು ದೂರದವರೆಗೆ ವ್ಯಾನ್ ಅನ್ನು ಎಳೆದೊಯ್ದಿದೆ. ಈ ಅವಘಡದಲ್ಲಿ ವ್ಯಾನ್ ಚಾಲಕನ ತಲೆಗೆ ಪೆಟ್ಟುಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಅಪಘಾತದ ದೃಶ್ಯದ ಫೋಟೋ ಮತ್ತು ವಿಡಿಯೋಗಳನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಘಟನೆಯಿಂದಾಗಿ ವಿಮಾನ ಹಾರಾಟ ಸುಮಾರು ಒಂದು ಗಂಟೆ ವಿಳಂಬವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...