alex Certify
ಕನ್ನಡ ದುನಿಯಾ       Mobile App
       

Kannada Duniya

800 ಯುವತಿಯರೊಂದಿಗೆ ವ್ಯಾಲೆಂಟೈನ್ ಡೇ..!

red rose

ಲಾಸ್ ಏಂಜಲೀಸ್: ಫೆಬ್ರವರಿ 14 ಬಂತೆಂದರೆ ಪ್ರೇಮಿಗಳಿಗೆ ಹಬ್ಬ. ಈ ದಿನವನ್ನು ವರ್ಷವಿಡೀ ನೆನಪಿರುವಂತೆ ಆಚರಿಸಬೇಕು ಎಂಬುದು ಪ್ರೇಮಿಗಳ ಮನದಾಳದ ಬಯಕೆ. ಇಲ್ಲೊಬ್ಬ ಯುವಕ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾನೆ.

ಲಾಸ್ ಏಂಜಲೀಸ್ ಸ್ಮಿತ್ ಫೀಲ್ಡ್ ನಿವಾಸಿಯಾಗಿರುವ 17 ವರ್ಷದ ಹೇಡನ್ ಗಾಡ್ ಫ್ರೆ ಎಂಬಾತ ಬರೋಬ್ಬರಿ 800 ಹುಡುಗಿಯರಿಗೆ ಗುಲಾಬಿಯನ್ನು ಕೊಡುವ ಮೂಲಕ ವಿಶೇಷವಾಗಿ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾನೆ ಇದಕ್ಕಾಗಿ ಅವನು ಅಪ್ಪನ ಪಾಕೇಟ್ ಮನಿ ಬಳಸಿಲ್ಲ. ಬದಲಿಗೆ ತಾನೇ ದುಡಿದ ಹಣದಿಂದ ಗುಲಾಬಿಗಳನ್ನು ಖರೀದಿಸಿದ್ದಾನೆ. ಪ್ರೇಮಿಗಳ ದಿನಾಚರಣೆಗಾಗಿ 30,668 ರೂ. ಖರ್ಚು ಮಾಡಿ ಆನ್ ಲೈನ್ ನಲ್ಲಿ ಗುಲಾಬಿಯನ್ನು ಖರೀದಿಸಿ ಹುಡುಗಿಯರಿಗೆ ಕೊಟ್ಟಿದ್ದಾನೆ.

ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಗಾಡ್ ಪ್ರೆ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ನಲ್ಲಿ, ಮೆಕ್ಸಿಕೋ ರೆಸ್ಟೋರೆಂಟ್ ನಲ್ಲಿ ಹಾಗೂ ದಿನಸಿ ಅಂಗಡಿಯೊಂದರಲ್ಲಿ ಹೇಡನ್ ಗಾಡ್ ಫ್ರೆ ಕೆಲಸ ಮಾಡಿ ಹಣ ಸಂಪಾದಿಸಿದ್ದಾನೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...