alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹೃದಯವಿದ್ರಾವಕ ದೃಶ್ಯ

baby

ಉಜ್ಬೇಕಿಸ್ತಾನದ ಮಾಲ್ ಒಂದರಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಯಿಯ ಕೈಯಿಂದ ಜಾರಿ 40 ಅಡಿ ಕೆಳಕ್ಕೆ ಬಿದ್ದ ಮಗು ದಾರುಣವಾಗಿ ಸಾವನ್ನಪ್ಪಿದೆ. ಈ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಜ್ಬೇಕಿಸ್ತಾನದ ಅಂದಿಜನ್ ನಗರದಲ್ಲಿರೋ ಒಜ್ಬೆಗಿಮ್ ಮಾಲ್ ನಲ್ಲಿ ನಡೆದ ಘಟನೆ ಇದು.

ಉದ್ದನೆಯ ಉಡುಪು ಹಾಗೂ ಮುಖಕ್ಕೆ ಸ್ಕಾರ್ಫ್ ಧರಿಸಿದ್ದ ಮಹಿಳೆ ತನ್ನ ಬಲಗೈಯಲ್ಲಿ ಮಗುವನ್ನೆತ್ತಿಕೊಂಡು ಎಸ್ಕಲೇಟರ್ ನಲ್ಲಿ ಬರುತ್ತಿದ್ಲು. ಆಕೆಯ ಉಡುಪು ಎಸ್ಕಲೇಟರ್ ಗೆ ಸಿಕ್ಕಿಹಾಕಿಕೊಂಡಿದೆ, ಆಯತಪ್ಪಿ ಅವಳು ಮೆಟ್ಟಿಲುಗಳ ಮೇಲೆ ಬಿದ್ದಿದ್ದಾಳೆ.

ಈ ವೇಳೆ ಮಗು ಕೂಡ ಕೈತಪ್ಪಿ 40 ಅಡಿ ಆಳದಿಂದ ಕೆಳಕ್ಕೆ ಬಿದ್ದಿದೆ. ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ರು, ಆದ್ರೆ ಮಗುವನ್ನು ಬದುಕಿಸಲು ಸಾಧ್ಯವಾಗಲಿಲ್ಲ. ತೀವ್ರ ರಕ್ತಸ್ರಾವದಿಂದ ಬಳಲಿದ ಕಂದಮ್ಮ ಕೊನೆಯುಸಿರೆಳೆದಿದೆ. ಈ ದುರ್ಘಟನೆ ನಡೆದ ಎಸ್ಕಲೇಟರ್ ಸುಮಾರು 4 ಮಹಡಿಯ ಕಟ್ಟಡದಷ್ಟು ಎತ್ತರವಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...