alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಕಷ್ಟ ಕಾಲದಲ್ಲಿ ನೆರವಾಗಿದ್ದ ಬಡವನಿಗೆ ಸಿಕ್ಕ ಪ್ರತಿಫಲ ಇದು….

ಜಾನಿ ಬಾಬ್ಬಿಟ್ ಮನೆ-ಮಠವಿಲ್ಲದ ಕಡು ಬಡವ. ಆದ್ರೂ ಅಪರಿಚಿತ ಮಹಿಳೆಯೊಬ್ಬಳಿಗೆ 20 ಡಾಲರ್ ಕೊಟ್ಟು ಸಹಾಯ ಮಾಡಿದ್ದ. ಕಾರಿಗೆ ಗ್ಯಾಸ್ ತುಂಬಿಸಲು ಹಣವಿಲ್ಲದೇ ಕಂಗಾಲಾಗಿದ್ದ ಮಹಿಳೆಗೆ ನೆರವಾಗಿದ್ದ. ಅದಕ್ಕೆ ಪ್ರತಿಫಲವಾಗಿ ಜಾನಿಗೆ ಅಮೆರಿಕದ ಜನ 110,000 ಡಾಲರ್ ಹಣ ಕೊಟ್ಟಿದ್ದಾರೆ.

ಕಳೆದ ತಿಂಗಳು ನ್ಯೂಜೆರ್ಸಿಯ ಕೇಟ್ ಮೆಕ್ಲೂರ್ ಎಂಬ ಯುವತಿ ಗೆಳೆಯನನ್ನು ಭೇಟಿಯಾಗಲು ಹೊರಟಿದ್ಲು. ಅರ್ಧ ದಾರಿಗೆ ಬರುವಷ್ಟರಲ್ಲಿ ಕಾರಿನಲ್ಲಿ ಗ್ಯಾಸ್ ಖಾಲಿಯಾಗಿತ್ತು. ಗ್ಯಾಸ್ ಹಾಕಿಸಲು ಹತ್ತಿರದ ಸ್ಟೇಶನ್ ಗೆ ಬಂದಿದ್ದಾಳೆ. ಅಲ್ಲಿ ಜಾನಿ ಕುಳಿತಿದ್ದ.

ಅವನ ಬಳಿ 20 ಡಾಲರ್ ಹಣವಿತ್ತು. ಅದರಲ್ಲೇ ಗ್ಯಾಸ್ ಖರೀದಿ ಮಾಡಿ ಅವಳಿಗೆ ತಂದುಕೊಟ್ಟಿದ್ದ. ಅದಕ್ಕೆ ಪ್ರತಿಯಾಗಿ ಏನನ್ನೂ ಕೇಳಲಿಲ್ಲ. ಬಳಿಕ ಅಲ್ಲಿಂದ ತೆರಳಿದ ಕೇಟ್, ತನ್ನ ಪ್ರಿಯಕರನ ಜೊತೆಗೆ ಮತ್ತೆ ಅದೇ ಗ್ಯಾಸ್ ಸ್ಟೇಶನ್ ಗೆ ಬಂದ್ಲು. ಜಾನಿಗಾಗಿ ಸ್ವೆಟರ್, ರಗ್, ಟೋಪಿ, ಗ್ಲೌಸ್, ಸಾಕ್ಸ್ ಎಲ್ಲವನ್ನೂ ತಂದುಕೊಟ್ಟು ಧನ್ಯವಾದ ಹೇಳಿದ್ಲು.

ಜಾನಿಯ ಪರೋಪಕಾರಿ ಭಾವನೆಯನ್ನು ನೋಡಿ ಖುಷಿಯಾಗಿದ್ದ ಕೇಟ್, ಅವನಿಗೆ ತಾನೂ ಸಹಾಯ ಮಾಡಬೇಕೆಂದು ನಿರ್ಧರಿಸಿದ್ಲು. ಇದಕ್ಕಾಗಿ ಕ್ರೌಡ್ ಫಂಡಿಂಗ್ ಮೂಲಕ 110,000 ಡಾಲರ್ ಸಂಗ್ರಹಿಸಿ ಕೊಟ್ಟಿದ್ದಾಳೆ. ಕನಿಷ್ಠ 10,000 ಡಾಲರ್ ಆದ್ರೂ ಕೊಟ್ಟು ಸಹಕರಿಸಬೇಕೆಂಬ ಆಲೋಚನೆ ಅವಳಲ್ಲಿತ್ತು. ಆದ್ರೆ ಅಮೆರಿಕನ್ನರು ಜಾನಿಗೆ ಭಾರೀ ಮೊತ್ತವನ್ನೇ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...