alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟೋರ್ ಮ್ಯಾನೇಜರ್ ನೀಡಿದ ತಪ್ಪು ಲಾಟರಿ ಬದಲಿಸ್ತು ಅದೃಷ್ಟ…!

ಅದೃಷ್ಟ ಖುಲಾಯಿಸಿದ್ರೆ ಭಿಕ್ಷುಕ ಕೂಡ ಶ್ರೀಮಂತನಾಗಬಹುದು. ದೇವರು ಕೊಟ್ಟರೆ ಕೈಬಿಚ್ಚಿ ಕೊಡ್ತಾನೆಂಬ ಮಾತಿದೆ. ಇದಕ್ಕೆ ನ್ಯೂಯಾರ್ಕ್ ಮಹಿಳೆ ಉತ್ತಮ ಉದಾಹರಣೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಲಾಟರಿ ಖರೀದಿ ಮಾಡಿದ್ದ ಮಹಿಳೆ ಈಗ ಕೋಟ್ಯಾಧಿಪತಿಯಾಗಿದ್ದಾಳೆ.

ವಾಸ್ತವವಾಗಿ ನ್ಯೂಯಾರ್ಕ್ ನ ಮ್ಯಾನ್ಹ್ಯಾಟನ್ ನಲ್ಲಿ ಶಾಪಿಂಗ್ ಗೆ ಹೋದ ಓಕ್ಸಾನಾ ಜಹರೋವ್ ಸೂಪರ್ ಮಾರ್ಕೆಟ್ ನಲ್ಲಿ 1 ಡಾಲರ್ ನೀಡಿ ಲಾಟರಿ ಖರೀದಿ ಮಾಡಿದ್ದಾಳೆ. ಆದ್ರೆ ಸೂಪರ್ ಮಾರ್ಕೆಟ್ ಮಾಲೀಕ ತಪ್ಪಿ ಓಕ್ಸಾಗೆ 10 ಡಾಲರ್ ನ ಸೆಟ್ ಆಫ್ ಲೈಫ್ ಲಾಟರಿ ನೀಡಿದ್ದಾನೆ.

ಬೇಸರದಲ್ಲಿಯೇ ಲಾಟರಿ ಖರೀದಿ ಮಾಡಿದ್ದ ಓಕ್ಸಾನ್ ಸ್ಕ್ರ್ಯಾಚ್ ಮಾಡಿ ನೋಡಿದ್ದಾಳೆ. ಅಲ್ಲಿದ್ದ ಹಣ ಆಕೆ ಜೀವನ ಬದಲಿಸಿದೆ. ಓಕ್ಸಾನಾಗ 5 ಮಿಲಿಯನ್ ಡಾಲರ್ ( ಸುಮಾರು 31 ಕೋಟಿ 66 ಲಕ್ಷ ರೂ.) ಸಿಕ್ಕಿದೆ. ಒಕ್ಸಾನಾಗೆ 19 ವರ್ಷಗಳ ಕಾಲ ಪ್ರತಿ ವರ್ಷ 1.64 ಕೋಟಿ ರೂಪಾಯಿ ಹಾಗೂ ಹೆಚ್ಚುವರಿ ಖರ್ಚಿಗಾಗಿ 38 ಲಕ್ಷ ರೂಪಾಯಿ ಸಿಗಲಿದೆ.

ದುಬಾರಿ ಬೆಲೆ ಲಾಟರಿ ಕೊಳ್ಳಲು ಮನಸ್ಸಿರಲಿಲ್ಲ. ಆದ್ರೂ 10 ಡಾಲರ್ ನೀಡಿ ಲಾಟರಿ ಖರೀದಿ ಮಾಡಿದೆ. ತಕ್ಷಣ ಸ್ಕ್ರ್ಯಾಚ್ ಮಾಡಲಿಲ್ಲ. ಬುಕ್ಮಾರ್ಕ್ ನಲ್ಲಿಟ್ಟಿದ್ದೆ. ಸ್ಕ್ರ್ಯಾಚ್ ಮಾಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ ಎನ್ನುತ್ತಾಳೆ ಒಕ್ಸಾನಾ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...