alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನಗಳಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗೆ ನಿಷೇಧ

lap

ಇನ್ಮೇಲೆ ನೀವು ವಿಮಾನದಲ್ಲಿ ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ ಗಳನ್ನು ಕೊಂಡೊಯ್ಯುವಂತಿಲ್ಲ. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಬ್ರಿಟನ್ ನ ಕೆಲವು ವಿಮಾನಯಾನ ಸಂಸ್ಥೆಗಳು ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗೆ ನಿಷೇಧ ಹೇರಿವೆ. ಅದರಲ್ಲೂ ಟರ್ಕಿ, ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಇವನ್ನು ಬ್ಯಾನ್ ಮಾಡಲಾಗಿದೆ.

ಅಲ್ ಖೈದಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳು ಬ್ಯಾಟರಿಗಳಲ್ಲಿ ಬಾಂಬ್ ಅಳವಡಿಸಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿವೆ ಅನ್ನೋ ಮಾಹಿತಿ ಅಮೆರಿಕದ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಸಾಮಾನ್ಯವಾಗಿ ವಿಮಾನ ಏರುವ ಮುನ್ನ ಪ್ರಯಾಣಿಕರು ತಮ್ಮ ಲ್ಯಾಪ್ ಟಾಪ್, ಮೊಬೈಲ್ ಗಳನ್ನು ಚಾರ್ಜ್ ಮಾಡಿಕೊಳ್ತಾರೆ.

ಅದನ್ನು ಗಮನದಲ್ಲಿಟ್ಟುಕೊಂಡು ಉಗ್ರ ಸಂಘಟನೆಗಳು ಬ್ಯಾಟರಿಗಳಲ್ಲಿ 100 ಗ್ರಾಂನಷ್ಟು ಸ್ಫೋಟಕಗಳನ್ನು ಅಳವಡಿಸುತ್ತಿವೆ ಎನ್ನಲಾಗಿದೆ. ಹಾಗಾಗಿ ತಮ್ಮ ಬಳಿಯಿರುವ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಸ್ಫೋಟಕ ಇದೆಯಾ ಅನ್ನೋದನ್ನು ಪರೀಕ್ಷಿಸಲು ಪ್ರಯಾಣಿಕರಿಗೆ ಏರ್ಪೋರ್ಟ್ ನಲ್ಲಿ ವ್ಯವಸ್ಥೆ ಮಾಡಿಕೊಡಲಾಗ್ತಿದೆ. ಕೇವಲ 7 ಸೆಕೆಂಡ್ ಗಳಲ್ಲಿ ಸ್ಫೋಟಕವನ್ನು ಪತ್ತೆ ಮಾಡಬಲ್ಲ ವೈಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...