alex Certify
ಕನ್ನಡ ದುನಿಯಾ       Mobile App
       

Kannada Duniya

ಕಿವಿಯಲ್ಲಿ ಹೊಕ್ಕಿಬಿಟ್ಟಿತ್ತು ಮುದ್ದಾಗಿ ಸಾಕಿದ್ದ ಹೆಬ್ಬಾವು

ashley-glawe_650x400_71486086887

ಅಮೆರಿಕದ ಒರೆಗಾನ್ ನಿವಾಸಿ, 17 ವರ್ಷದ ಯುವತಿ ಆ್ಯಶ್ಲೆ ಗ್ಲಾವೆ ಹೆಬ್ಬಾವಿನ ಮರಿಯೊಂದನ್ನು ಮುದ್ದಿನಿಂದ ಸಾಕಿದ್ಲು. ಅದನ್ನು ಕತ್ತಿನ ಮೇಲೆ ಹಾಕಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಯಡವಟ್ಟಾಗಿದೆ. ಹಾವು ಅವಳ ಕಿವಿಯ ರಂಧ್ರದೊಳಕ್ಕೆ ತೂರಿಕೊಂಡುಬಿಟ್ಟಿದೆ.

ಒಂದ್ಕಡೆ ನೋವು, ಇನ್ನೊಂದ್ಕಡೆ ಗಾಬರಿ. ಹಾವನ್ನು ಎಳೆದು ತೆಗೆಯಲು ಆ್ಯಶ್ಲೆ ಸಾಕಷ್ಟು ಸರ್ಕಸ್ ಮಾಡಿದ್ಲು. ಸಾಧ್ಯವಾಗದೇ ಇದ್ದಾಗ ತುರ್ತು ಸೇವೆಗೆ ಕರೆ ಮಾಡಿ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ವೈದ್ಯರು ಯುವತಿಯ ಕಿವಿಗೆ ಅನಸ್ತೇಷಿಯಾ ಕೊಟ್ಟು ಹಾವನ್ನು ಹೊರಕ್ಕೆ ತೆಗೆದಿದ್ದಾರೆ.

ಕಿವಿಯೋಲೆಯಂತೆ ಹಾವು ಆ್ಯಶ್ಲೆಯ ಕಿವಿಯ ರಂಧ್ರದಲ್ಲಿ ಹೊಕ್ಕು ತೂಗಾಡುತ್ತಿರುವ ಫೋಟೋ ಸಾಮಾಜಿಕ ತಾಣದಲ್ಲಿ ಸಂಚಲನವನ್ನೇ ಎಬ್ಬಿಸಿದೆ. ಆದ್ರೆ ಸೆಲ್ಫಿಗಾಗಿ ಇಂತಹ ಹುಚ್ಚಾಟಕ್ಕೆ ಕೈಹಾಕಿದ್ದ ಆ್ಯಶ್ಲೆಗೆ ಅವಳೇ ಸಾಕಿದ ಹೆಬ್ಬಾವು ಪಾಠ ಕಲಿಸಿದೆ. ಇನ್ಮೇಲೆ ಬಹುಷಃ ಯುವತಿ ಹಾವನ್ನು ಮೈಮೇಲೆ ಹಾಕಿಕೊಂಡು ಇಂತಹ ತಮಾಷೆ ಆಟಕ್ಕೆ ಮುಂದಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...