alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿ ಹೊರಡಿಸಿರುವ ಸುತ್ತೋಲೆಯನ್ನು ನೋಡಿದ್ರೆ ಶಾಕ್ ಆಗ್ತೀರಾ…!

ಅಮೆರಿಕದ ಶಾಲೆಯೊಂದು ವಿದ್ಯಾರ್ಥಿಗಳಿಗೆ ನೀಡಿದ ಪತ್ರ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡ್ತಾ ಇದೆ. ಅಬ್ಬಾ….ಶಿಕ್ಷಕರು ಅಂತಹದ್ದೇನು ಹೇಳಿದ್ದಾರೆ ಎಂಬ ಯೋಚನೆ ನಿಮ್ಮ ತಲೆ ಕೆಡಿಸುತ್ತಿರಬಹುದು. ಇಲ್ಲಾ ಶಾಲೆಯಲ್ಲಿ ಮತ್ತೇನು ಹೊಸ ನಿಯಮ ಜಾರಿಗೆ ಮಾಡಿದ್ದಾರೆ ಎಂಬ ಕುತೂಹಲ. ಹಾಗಿದ್ರೆ, ಈ ಚಿತ್ರವನ್ನು ಒಮ್ಮೆ ನೋಡಿ.

ಎಸ್….ನೀವು ನೋಡಿದ ಚಿತ್ರದಲ್ಲಿ ಶಿಕ್ಷಕಿ ಹೊರಡಿಸಿರುವ ಸುತ್ತೋಲೆ ಇದೆ. ಈ ಪತ್ರವನ್ನು ಶಿಕ್ಷಕಿ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಒಂದು ತಿಂಗಳಿಗೆ ತರಗತಿಯ ವೇಳೆ ಕೇವಲ 2 ಬಾರಿ ಮಾತ್ರ ಶೌಚಾಲಯ ಬಳಸಲು ಅನುಮತಿ ನೀಡಲಾಗುತ್ತದೆ. ಅಷ್ಟೇ ಅಲ್ಲಾ ಶೌಚಕ್ಕೆ ಆಗಲಿ, ನೀರು ಹಾಗೂ ಆರೋಗ್ಯ ಸಮಸ್ಯೆಯಾದಲ್ಲಿ ಶಿಕ್ಷಕಿಯ ಸಹಿ ಪಡೆಯುವುದು ಕಡ್ಡಾಯವಾಗಿದೆ. ವಿದ್ಯಾರ್ಥಿ ಒಂದು ತಿಂಗಳಲ್ಲಿ ಎರಡು ಬಾರಿ ಮಾತ್ರ ಈ ಸೌಲಭ್ಯ ಬಳಸಿಕೊಳ್ಳುವ ಅವಕಾಶ ನೀಡಲಾಗಿದೆ.

ಈ ಪಾಸ್ ಕಳೆದುಕೊಂಡ್ರೆ ನಾವು ಜವಾಬ್ದಾರರಲ್ಲ ಎಂದು ತಿಳಿಸಲಾಗಿದೆ. ಈ ಬಗ್ಗೆ ನಿಮಗೆ ಪ್ರಶ್ನೆಗಳು ಇದ್ದಲ್ಲಿ ಶಾಲಾ ಸಮಯದಲ್ಲಿ ಸಂಪರ್ಕಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ವೈಟ್ ಎಂಬ ಶಿಕ್ಷಕಿ ತನ್ನ ತರಗತಿಯ ವಿದ್ಯಾರ್ಥಿಗಳಿಗೆ ಈ ಪತ್ರ ನೀಡಿದ್ದಾರೆ. ಅಲ್ಲದೆ ಯಾವುದೇ ವಿದ್ಯಾರ್ಥಿ ನಿಯಮವನ್ನು ಉಲ್ಲಂಘಿಸಿದ್ರೆ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಸದ್ಯ ಶಿಕ್ಷಕಿಯ ನಡೆಯ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...