alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ ಈ ಸೆನೆಟರ್ ಮಾಡಿರೋ ಕೆಲ್ಸ

ಅಮೆರಿಕದಲ್ಲಿ ನಡೆದಿರೋ ತಮಾಷೆಯ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾದವರು ಅಮೆರಿಕದ ಸೆನೆಟರ್ ಒರಿನ್ ಹ್ಯಾಚ್. ಸೆನೆಟ್ ಜುಡಿಶಿಯರಿ ಕಮಿಟಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ರು.

ಮಾತಿನ ಮಧ್ಯೆ ತಮ್ಮ ಕನ್ನಡಕ ತೆಗೆದಿದ್ದಾರೆ. ಅದರಲ್ಲೇನಿದೆ ವಿಶೇಷ ಅಂದ್ಕೋಬೇಡಿ. ಅವರು ಕನ್ನಡಕವನ್ನು ಧರಿಸಿಯೇ ಇರಲಿಲ್ಲ. ಕನ್ನಡಕವನ್ನು ಹಾಕಿಕೊಂಡಿದ್ದೇನೆ ಎಂಬ ಭಾವನೆ ಅವರಲ್ಲಿತ್ತು. ಹಾಗಾಗಿ ಕನ್ನಡಕ ಧರಿಸದೆಯೇ ಅದನ್ನು ತೆಗೆದಿದ್ದಾರೆ.

ಕನ್ನಡಕ ಹಾಕಿಕೊಂಡು ಆಗಾಗ ಅದನ್ನು ಸರಿಪಡಿಸಿಕೊಳ್ಳೋದು, ಮಾತಿನ ನಡುವೆ ತೆಗೆದು ಮತ್ತೆ ಹಾಕಿಕೊಳ್ಳೋದು ಇವೆಲ್ಲವೂ ಒರಿನ್ ಗೆ ಮೊದಲಿನಿಂದ್ಲೂ ಅಭ್ಯಾಸವಿತ್ತು. ಹಾಗಾಗಿ ಅಭ್ಯಾಸ ಬಲದಂತೆ ಕನ್ನಡಕ ಧರಿಸದೇ ಇದ್ರೂ ಅದನ್ನು ತೆಗೆದಿದ್ದಾರೆ. ತಾವು ಈ ರೀತಿ ಮಾಡಿರೋದು ಅವರ ಗಮನಕ್ಕೇ ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...