alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತನ ಮೊಬೈಲ್ ಅನ್ ಲಾಕ್ ಮಾಡಲು ಅಂತ್ಯಸಂಸ್ಕಾರಕ್ಕೆ ಬಂದ ಪೊಲೀಸ್

ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬನ ಸಾವಿನ ಪ್ರಕರಣದ ತನಿಖೆ ನಡೆಸ್ತಾ ಇದ್ದ ಪೊಲೀಸರು, ಆತನ ಮೊಬೈಲ್ ಅನ್ನು ಅನ್ ಲಾಕ್ ಮಾಡಲು ಬೆರಳಚ್ಚು ಬೇಕಾಗಿದ್ದರಿಂದ ಅವನ ಅಂತ್ಯಸಂಸ್ಕಾರಕ್ಕೇ ಬಂದಿದ್ದರು.

ಲಾರ್ಗೋ ಪೊಲೀಸ್ ಅಧಿಕಾರಿಯೊಬ್ಬರು 30 ವರ್ಷದ ಲಿನಸ್ ಫಿಲಿಪ್ ಎಂಬಾತನನ್ನು ಹತ್ಯೆ ಮಾಡಿದ್ದರು. ಫಿಲಿಪ್ ಮನೆಯಲ್ಲೇ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯುತ್ತಿದ್ದವು. ಈ ವೇಳೆ ಕೊಲೆ ಪ್ರಕರಣದ ತನಿಖೆ ನಡೆಸ್ತಾ ಇದ್ದ ಇಬ್ಬರು ಡಿಟೆಕ್ಟಿವ್ ಗಳು ಅಲ್ಲಿಗೆ ಬಂದಿದ್ದಾರೆ. ಮೃತ ಫಿಲಿಪ್ ನ ಬೆರಳಚ್ಚಿನ ಸಹಾಯದಿಂದ ಮೊಬೈಲ್ ಅನ್ನು ಅನ್ ಲಾಕ್ ಮಾಡಲು ಯತ್ನಿಸಿದ್ದಾರೆ.

ಆದ್ರೆ ಸಾಧ್ಯವಾಗಿಲ್ಲ. ಈ ರೀತಿ ಮಾಡುವ ಮೂಲಕ ಫಿಲಿಪ್ ಮೃತದೇಹಕ್ಕೆ ಅಧಿಕಾರಿಗಳು ಅಗೌರವ ತೋರಿದ್ದಾರೆ ಅಂತಾ ಆತನ ಭಾವೀ ಪತ್ನಿ ವಿಕ್ಟೋರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಆದ್ರೆ ತನಿಖೆಗಾಗಿ ಮಾಡಿರೋ ಕೆಲಸವಾಗಿರೋದ್ರಿಂದ ಇದು ಕಾನೂನಿಗೆ ವಿರುದ್ಧವಲ್ಲ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...