alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದ ರೆಕ್ಕೆ ಹಿಡಿದು ಕೆಳಕ್ಕೆ ಹಾರಿದ ಭೂಪ

ಅಮೆರಿಕದ ಡಲ್ಲಾಸ್ ಗೆ ಹೊರಟಿದ್ದ ವಿಮಾನವೊಂದು ಅಲ್ಬುಕರ್ಕ್ ಇಂಟರ್ ನ್ಯಾಶನಲ್ ಸನ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಷ ಮಾಡಿದೆ. ಹೆದರಿ ಕಿರುಚಿಕೊಂಡ ಪ್ರಯಾಣಿಕರು, ವಿಂಗ್ ಮೂಲಕ ಕೆಳಕ್ಕೆ ಜಿಗಿಯಲು ಯತ್ನಿಸಿದ್ದರಿಂದ ವಿಮಾನವನ್ನು ಲ್ಯಾಂಡ್ ಮಾಡಲಾಯ್ತು.

ಸೌತ್ ವೆಸ್ಟ್ ಫ್ಲೈಟ್ 3562 ವಿಮಾನ ಫೀನಿಕ್ಸ್ ನಿಂದ ಹೊರಟು ಡಲ್ಲಾಸ್ ನ ಲವ್ ಫೀಲ್ಡ್ ಗೆ ತೆರಳುತ್ತಿತ್ತು. ವಿಮಾನ ಟೇಕಾಫ್ ಆಗಿ ಒಂದು ಗಂಟೆ ಕಳೆದ ಬಳಿಕ ಕ್ಯಾಬಿನ್ ನಲ್ಲಿ ವಿಚಿತ್ರವಾದ ವಾಸನೆ ಹೊರಹೊಮ್ಮಿತ್ತು.

ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಅಂತಾ ಪ್ರಯಾಣಿಕರೆಲ್ಲ ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡುವಂತೆ ಕಿರುಚಿಕೊಂಡಿದ್ದಾರೆ. ಕೆಲವರು ವಿಮಾನದಿಂದ ಕೆಳಕ್ಕೆ ಜಿಗಿಯಲು ಸಹ ಮುಂದಾದ್ರು.

ಕೆಲವರು ತಮ್ಮ ಪ್ರಾಣವೇ ಹೋಗಬಹುದು ಅನ್ನೋ ಭಯದಲ್ಲಿ ಪ್ರೀತಿಪಾತ್ರರಿಗೆ ಮೆಸೇಜ್ ಕೂಡ ಕಳುಹಿಸಿದ್ದಾರೆ. ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ವ್ಯಕ್ತಿಯೊಬ್ಬ ವಿಮಾನದ ರೆಕ್ಕೆ ಹಿಡಿದುಕೊಂಡು ಕೆಳಕ್ಕೆ ಹಾರಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...