alex Certify
ಕನ್ನಡ ದುನಿಯಾ       Mobile App
       

Kannada Duniya

ಜನಾಂಗೀಯ ದಾಳಿ ತಡೆದಿದ್ದಕ್ಕೆ ಇಬ್ಬರ ಪ್ರಾಣವೇ ಹೋಯ್ತು!

us-attack

ಅಮೆರಿಕದಲ್ಲಿ ಜನಾಂಗೀಯ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಪೋರ್ಟ್ ಲ್ಯಾಂಡ್ ಟ್ರೈನ್ ನಲ್ಲಿ ಇಬ್ಬರು ಮುಸ್ಲಿಂ ಯುವತಿಯರಿಗೆ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆ ಮಾಡಿದ್ದ. ಅದನ್ನು ತಡೆದಿದ್ದಕ್ಕೆ ಮೂವರಿಗೆ ಚಾಕುವಿನಿಂದ ಇರಿದಿದ್ದಾನೆ. ಇಬ್ಬರು ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮುಸ್ಲಿಂ ಯುವತಿಯರು ರೈಲು ಏರುತ್ತಿದ್ದಂತೆ ಆ ವ್ಯಕ್ತಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದ್ದ. ಆತ ಮಾನಸಿಕ ಅಸ್ವಸ್ಥನಿರಬಹುದು ಅಂತಾ ಪ್ರತ್ಯಕ್ಷದರ್ಶಿಗಳು ಶಂಕಿಸಿದ್ದಾರೆ. ಮದ್ಯ ಅಥವಾ ಡ್ರಗ್ಸ್ ನಶೆಯಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ ಅಂತಾನೂ ಹೇಳಲಾಗ್ತಿದೆ.

ಘಟನೆ ನಂತರ ರೈಲನ್ನು ಹಳಿಗಳ ನಡುವೆಯೇ ನಿಲ್ಲಿಸಿ ಪೊಲೀಸರು ತನಿಖೆ ಆರಂಭಿಸಿದ್ರು. ಆದ್ರೆ ಪೊಲೀಸ್ ವಿಚಾರಣೆ ವೇಳೆ ಮುಸ್ಲಿಂ ಯುವತಿಯರು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಹಂತಕ ಮುಸ್ಲಿಂ ವಿರೋಧಿಯಾಗಿದ್ದು, ಜನಾಂಗೀಯ ದಾಳಿ ನಡೆಸಿದ್ದಾನೆ ಎನ್ನಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...