alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ನಲ್ಲಿ ಕೂತಿದ್ದ ಪತಿಯತ್ತ ಗುಂಡು ಹಾರಿಸಿದ್ಲು ಪತ್ನಿ, ಕಾರಣ?

ಪತಿ – ಪತ್ನಿ ಮಧ್ಯೆ ಜಗಳ ಕಾಮನ್. ಒಮ್ಮೊಮ್ಮೆ ಅತಿರೇಕಕ್ಕೆ ಹೋಗೋದುಂಟು. ಅಮೆರಿಕದ ಅರಿಜೋನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಟಾಯ್ಲೆಟ್ ನಲ್ಲಿ ಬ್ಯುಸಿಯಾಗಿದ್ದ ಪತಿಯತ್ತ, ಕೆರಳಿದ ಪತ್ನಿ 2 ಬಾರಿ ಗುಂಡು ಹಾರಿಸಿದ್ದಾಳೆ.

ಡಿಸೆಂಬರ್ 30ರಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ, ತನ್ನ ಮೇಲೆ ಪತ್ನಿ ಗುಂಡು ಹಾರಿಸ್ತಿದ್ದಾಳೆ ಅಂತಾ ದೂರು ನೀಡಿದ್ದ. ಕೂಡಲೇ ಮನೆಗೆ ಬಂದ ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ. ತಾನು ಆತನ ಮೇಲೆ ಗುಂಡು ಹಾರಿಸಿಲ್ಲ, ಅವನ ಗಮನ ಸೆಳೆಯಲು ಗೋಡೆಗೆ ಶೂಟ್ ಮಾಡಿದ್ದೇನೆ ಎಂದಿದ್ದಾಳೆ ಪತ್ನಿ.

ಯಾವುದೊ ವಿಚಾರಕ್ಕೆ ಇಬ್ಬರ ಮಧ್ಯೆ ವಾದ ವಿವಾದ ನಡೆದಿದೆ. ಪತಿ ತನ್ನ ಮಾತುಗಳನ್ನು ಕೇಳಿಸಿಕೊಳ್ತಿಲ್ಲ ಅನ್ನೋ ಕೋಪ ಪತ್ನಿಗೆ. ಟಾಯ್ಲೆಟ್ ನಲ್ಲಾದ್ರೂ ಶಾಂತಿಯಿಂದ ಕೂರೋಣ ಎಂದುಕೊಂಡು ಆತ ಸುಮ್ಮನಿದ್ದ. ಶೌಚಾಲಯದೊಳಕ್ಕೇ ನುಗ್ಗಿದ ಪತ್ನಿ ಇಷ್ಟು ಅವಾಂತರ ಮಾಡಿದ್ದಾಳೆ. ಆತನ ತಲೆಯಿಂದ 7 ಇಂಚು ಮೇಲ್ಭಾಗದಲ್ಲಿ ಗುಂಡು ಹಾರಿಸಿದ್ದರಿಂದ ಪೊಲೀಸರು ಮಹಿಳೆಯನ್ನು ಬಿಡುಗಡೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...