alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದಲ್ಲಿ ಭಾರತೀಯನ ಅಂಗಡಿಗೆ ಬೆಂಕಿ ಇಡಲು ಯತ್ನ

us-burn

ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಫ್ಲೋರಿಡಾದಲ್ಲಿ ಅಮೆರಿಕದ ವ್ಯಕ್ತಿಯೊಬ್ಬ ಭಾರತೀಯ ಮೂಲದವರ ಅಂಗಡಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಮುಸ್ಲಿಂರು ಎಂದುಕೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾನೆ.

ಅಂಗಡಿ ಮಾಲೀಕ ಮುಸಲ್ಮಾನ ಎಂದುಕೊಂಡ 64 ವರ್ಷದ ವ್ಯಕ್ತಿಯೊಬ್ಬ ಮಳಿಗೆಗೆ ಬೆಂಕಿ ಇಡಲು ಸಜ್ಜಾಗಿದ್ದ. ಅರಬರನ್ನು ದೇಶದಿಂದ ಓಡಿಸಬೇಕೆಂದು ಈ ಕೃತ್ಯಕ್ಕೆ ಮುಂದಾಗಿದ್ದಾಗಿ ಆರೋಪಿ ರಿಚರ್ಡ್ ಲಾಯ್ಡ್ ಒಪ್ಪಿಕೊಂಡಿದ್ದಾನೆ.

ದೇಶಕ್ಕಾಗಿ ತಾನು ಈ ಕೆಲಸ ಮಾಡ್ತಾ ಇದ್ದು, ಇಡೀ ಕಟ್ಟಡವನ್ನೇ ಸುಟ್ಟುಬಿಡಬೇಕು ಎಂದುಕೊಂಡಿದ್ದೆ ಅಂತಾ ಹೇಳಿದ್ದಾನೆ. ಲಾಯ್ಡ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ತಿಂಗಳು ಅಮೆರಿಕದ ಕಾನ್ಸಾಸ್ ನಲ್ಲಿ ಹೈದ್ರಾಬಾದ್ ನ ಎಂಜಿನಿಯರ್ ಶ್ರೀನಿವಾಸ್ ರನ್ನು ಜನಾಂಗೀಯ ದ್ವೇಷಕ್ಕಾಗಿ ಹತ್ಯೆ ಮಾಡಲಾಗಿತ್ತು. ಅದಾದ ಮೇಲೆ ಇಂತಹ ದೌರ್ಜನ್ಯ ಪ್ರಕರಗಳು ವರದಿಯಾಗುತ್ತಲೇ ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...