alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಮೂಗು ಕಚ್ಚಿದ ತಪ್ಪಿಗೆ ಶಿಕ್ಷೆ ಏನು ಗೊತ್ತಾ?

ಕನೆಕ್ಟಿಕಟ್ ನಲ್ಲಿ ಪತ್ನಿಯ ಮೂಗು ಕಚ್ಚಿದ ತಪ್ಪಿಗೆ ಪತಿ ಜೈಲು ಸೇರಿದ್ದಾನೆ. 55 ವರ್ಷದ ರಾಡ್ವೆಲ್ ಕ್ಲೇ ಎಂಬಾತನಿಗೆ ಹಾರ್ಟ್ ಫೋರ್ಡ್ ಕೋರ್ಟ್ 6 ವರ್ಷಕ್ಕೂ ಅಧಿಕ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಿದೆ. ಆದ್ರೆ ತಾನು ಅಪರಾಧಿ ಅನ್ನೋದಕ್ಕೆ ಸೂಕ್ತ ಸಾಕ್ಷಾಧಾರಗಳೇ ಇಲ್ಲ ಅಂತಾ ರಾಡ್ವೆಲ್ ವಾದಿಸುತ್ತಿದ್ದಾನೆ.

ರಾಡ್ವೆಲ್ ಮತ್ತವನ ಪತ್ನಿ ಬ್ಲೂಮ್ ಫೀಲ್ಡ್ ನಲ್ಲಿ ವಾಸವಾಗಿದ್ದಾರೆ. 2015ರ ಆಗಸ್ಟ್ ನಲ್ಲಿ ಯಾವುದೋ ವಿಚಾರಕ್ಕೆ ಪತಿ-ಪತ್ನಿ ಮಧ್ಯೆ ಜಗಳ ನಡೆದಿತ್ತು. ಕೋಪದಲ್ಲಿ ರಾಡ್ವೆಲ್ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿಬಿಟ್ಟಿದ್ದ. ಇದರಿಂದ ಶಾಶ್ವತವಾಗಿ ಆಕೆಯ ಮೂಗು ವಿರೂಪವಾಗಿಬಿಟ್ಟಿದೆ.

ನಂತರ ಆಕೆ ಪತಿಯಿಂದ ವಿಚ್ಛೇದನ ಕೂಡ ಪಡೆದಿದ್ದಾಳೆ. ಆದ್ರೂ ರಾಡ್ವೆಲ್ ಅವಳನ್ನು ಬಿಡಲು ಸಿದ್ಧನಿಲ್ಲ. ಆತ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಾನೆ ಅಂತಾ ಮಹಿಳೆ ದೂರು ನೀಡಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಒಟ್ಟು 15 ವರ್ಷಗಳ ಶಿಕ್ಷೆ ವಿಧಿಸಿದೆ. ಅದರಲ್ಲಿ 6.5 ವರ್ಷಗಳ ಕಾಲ ರಾಡ್ವೆಲ್ ಜೈಲು ಶಿಕ್ಷೆ ಅನುಭವಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...