alex Certify
ಕನ್ನಡ ದುನಿಯಾ       Mobile App
       

Kannada Duniya

ಕನಸಿನಿಂದ ಎದ್ದ ಭೂಪ ಪತ್ನಿಯ ಕತ್ತು ಹಿಸುಕಿದ್ದ

dream

ಪೆನ್ಸಿಲ್ವೇನಿಯಾದಲ್ಲಿ ವ್ಯಕ್ತಿಯೊಬ್ಬನಿಗೆ ಹೆಂಡತಿ ತನಗೆ ಮೋಸ ಮಾಡುತ್ತಿರುವಂತೆ ಕನಸು ಬಿದ್ದಿದ್ದಂತೆ, ಕನಸಿನಿಂದ ಎಚ್ಚೆತ್ತ ಆ ಭೂಪ ಪತ್ನಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ. 49 ವರ್ಷದ ಕೊನ್ರಾಡ್ ರುಡಲವಗೆ ಎಂಬಾತ ರಾತ್ರಿ ಮದ್ಯಪಾನ ಮಾಡಿ ಮಲಗಿದ್ದ. ಬೆಳಗ್ಗೆ ಏಳುವಷ್ಟರಲ್ಲಿ ಪತ್ನಿ ತನಗೆ ಮೋಸ ಮಾಡ್ತಿದ್ದಾಳೆ, ಇನ್ಯಾರದೋ ಜೊತೆ ಸಂಬಂಧ ಬೆಳೆಸಿದ್ದಾಳೆ ಅನ್ನೋ ಭಾವನೆ ಅವನ ಮನಸ್ಸಿನಲ್ಲಿ ಬಂದುಬಿಟ್ಟಿತ್ತು.

ನಿದ್ದೆಯಿಂದ ಎದ್ದವನೇ ಹೆಂಡತಿಯ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಆತನ ಮಗಳು ಪೊಲೀಸರಿಗೆ ಕರೆ ಮಾಡಲು ಮುಂದಾಗಿದ್ದಾಳೆ, ಆಗ ಪುತ್ರಿಯ ಮೇಲೂ ಕೊನ್ರಾಡ್ ಹಲ್ಲೆ ಮಾಡಿದ್ದಾನೆ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿದ ಮಗಳು ಕೂಡಲೇ ಅಕ್ಕಪಕ್ಕದವರ ಸಹಾಯ ಕೇಳಿದ್ಲು. ನೆರೆಹೊರೆಯವರೆಲ್ಲ ಬಂದು ಕೊನ್ರಾಡ್ ಕೈಯಿಂದ ಪತ್ನಿಯನ್ನು ಬಚಾವ್ ಮಾಡಿದ್ರು. ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಕೊನ್ರಾಡ್ ಈಗ ಜೈಲು ಸೇರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...