alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದಾರಾ ಡೊನಾಲ್ಡ್ ಟ್ರಂಪ್ ಪತ್ನಿ…?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಒಂದು ವಾರದಿಂದ ನಾಪತ್ತೆಯಾಗಿದ್ದಾರೆಂಬ ಸುದ್ದಿ ಹಬ್ಬಿದೆ. ಮುಂದಿನ ವಾರ ಕ್ವಿಬೆಕ್ ನಲ್ಲಿ ನಡೆಯುವ ಜಿ7 ಶೃಂಗಸಭೆಗೆ ಮೆಲಾನಿಯಾ ಗೈರಾಗಲಿದ್ದಾರೆ. ಭಾನುವಾರ ವೈಟ್ ಹೌಸ್ ಈ ಬಗ್ಗೆ ಪತ್ರಿಕಾ ವರದಿ ಬಿಡುಗಡೆ ಮಾಡಿದೆ. ಜೂನ್ 12 ರಂದು ಸಿಂಗಾಪುರದಲ್ಲಿ ನಡೆಯುವ ಉತ್ತರ ಕೋರಿಯಾ ನಾಯಕ ಕಿಮ್ ಜೋಂಗ್ ಭೇಟಿ ಕಾರ್ಯಕ್ರಮದಲ್ಲೂ ಮೆಲಾನಿಯಾ ಗೈರಾಗಲಿದ್ದಾರೆ.

ಮೇ.10 ರ ನಂತ್ರ ಮೆಲಾನಿಯಾ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಮೇ.10 ರಂದು ಡೊನಾಲ್ಡ್ ಟ್ರಂಪ್ ಜೊತೆ ಕಾಣಿಸಿಕೊಂಡಿದ್ದ ಮೆಲಾನಿಯಾ ಕೊರಿಯಾ ಜೈಲಿನಿಂದ ಬಿಡುಗಡೆಯಾದ ಮೂವರು ಅಮೆರಿಕಾ ನಾಗರಿಕರನ್ನು ಸ್ವಾಗತಿಸಿದ್ದರು. ಆ ನಂತ್ರ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೆಲಾನಿಯಾ ಕಾಣಿಸಿಕೊಂಡಿಲ್ಲ. ಅಮೆರಿಕಾ ಹಾಗೂ ವರ್ಲ್ಡ್ ಮಿಡಿಯಾಗಳಲ್ಲಿ ಮೆಲಾನಿಯಾ ನಾಪತ್ತೆಯಾಗಿದ್ದಾರೆಂಬ ಸುದ್ದಿ ಹಬ್ಬಿದೆ.

ಶ್ವೇತಭವನ ಮೂಲದ ಪ್ರಕಾರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮೆಲಾನಿಯಾ ಮೇ. 14 ರಂದು ಆಸ್ಪತ್ರೆಗೆ ದಾಖಲಾಗಿದ್ದರಂತೆ. ಮೇ.19ರಂದು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...