alex Certify
ಕನ್ನಡ ದುನಿಯಾ       Mobile App
       

Kannada Duniya

GPS ನೋಡಿ ಕಾರು ಚಲಾಯಿಸಿದವನು ಹೋಗಿದ್ದೆಲ್ಲಿಗೆ…?

ತಂತ್ರಜ್ಞಾನ ಯಾವಾಗಲೂ ನಮ್ಮನ್ನು ಕಾಪಾಡುವುದಿಲ್ಲ. ಒಮ್ಮೊಮ್ಮೆ ಟೆಕ್ನಾಲಜಿಯಿಂದ್ಲೇ ನಾವು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ. ಅಮೆರಿಕದ ವಾಷಿಂಗ್ಟನ್ ನಲ್ಲಿ ವ್ಯಕ್ತಿಯೊಬ್ಬನಿಗೆ ಈ ಅನುಭವವಾಗಿದೆ. ವರ್ಮೊಂಟ್ ಎಂಬಲ್ಲಿ ಜಿಪಿಎಸ್ ನೋಡಿಕೊಂಡು ಕಾರು ಚಲಾಯಿಸ್ತಿದ್ದ ಆತ, ಹೆಪ್ಪುಗಟ್ಟಿದ್ದ ಸರೋವರಕ್ಕೆ ವಾಹನ ಇಳಿಸಿಬಿಟ್ಟಿದ್ದಾನೆ.

ಮೂವರು ಸ್ನೇಹಿತರು ಎಸ್ ಯು ವಿ ಬಾಡಿಗೆ ಪಡೆದು ಪ್ರಯಾಣಿಸುತ್ತಿದ್ರು. ಜಿಪಿಎಸ್ ಡೈರೆಕ್ಷನ್ ನಂತೆ ಅವರಲ್ಲೊಬ್ಬ ಕಾರು ಚಲಾಯಿಸುತ್ತಿದ್ದ. ನೇರವಾಗಿ ಸಾಗುವಂತೆ ಜಿಪಿಎಸ್ ಸೂಚನೆ ನೀಡಿದೆ. ಅದರಂತೆ ಆತ ನೇರವಾಗಿಯೇ ಬಂದಿದ್ದಾನೆ, ಕಾರು ಹೆಪ್ಪುಗಟ್ಟಿದ್ದ ಸರೋವರಕ್ಕೆ ಧುಮುಕಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ತೊಂದರೆಯಾಗಿಲ್ಲ, ಸುರಕ್ಷಿತವಾಗಿ ಮೇಲಕ್ಕೆ ಬಂದಿದ್ದಾರೆ. ಆ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿತ್ತು, ಮುಂದೆ ಏನಿದೆ ಅನ್ನೋದು ಕೂಡ ಸರಿಯಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಈ ಅವಘಡ ಸಂಭವಿಸಿದೆ ಅಂತಾ ಚಾಲಕ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...