alex Certify
ಕನ್ನಡ ದುನಿಯಾ       Mobile App
       

Kannada Duniya

‘ಟ್ರಂಪ್’ಕಾರ್ಡ್ ಹಾಕಿದ ರಿಯಲ್ ಎಸ್ಟೇಟ್ ಉದ್ಯಮಿ

us-donald-nir

ಆಗರ್ಭ ಶ್ರೀಮಂತ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುತ್ತಲೇ ಅಮೆರಿಕದಲ್ಲಿ ಹೊಸದೊಂದು ಸಂಚಲನ ಸೃಷ್ಠಿಯಾಗಿತ್ತು. ರಾಜಕಾರಣಿಯಲ್ಲದ ಟ್ರಂಪ್ ಪಕ್ಷ ರಾಜಕಾರಣದ ಮೂಲಕ ತಮ್ಮ ವಿವಾದಿತ ವ್ಯಕ್ತಿತ್ವವನ್ನೂ ಪರಿಚಯಿಸಿದ್ದರು.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು 276-218 ಮತಗಳ ಅಂತರದಿಂದ ಡೊನಾಲ್ಡ್ ಟ್ರಂಪ್ ಪರಾಭವಗೊಳಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಾಗಲೇ ಟ್ರಂಪ್ ತಮ್ಮ ಬಳಿ 66,970 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದರು. ರಿಯಲ್ ಎಸ್ಟೇಟ್ ಮತ್ತು ಷೇರು ಆದಾಯದಲ್ಲಿ ಟ್ರಂಪ್ ತೊಡಗಿಕೊಂಡಿದ್ದು, ಆಗರ್ಭ ಶ್ರೀಮಂತ ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ದೇಶದ ಸಾರಥ್ಯ ವಹಿಸಿಕೊಳ್ಳಲು ಇಟ್ಟ ಮೊದಲ ಹೆಜ್ಜೆಯೇ ಸಂಚಲನ ಮೂಡಿಸಿತ್ತು.

ಬದಲಾವಣೆಯನ್ನು ಹಿಂದಿನಿಂದಲೂ ಬಯಸುವ ಅಮೆರಿಕ ವಾಸಿಗಳಿಗೆ ಡೆಮಾಕ್ರಟಿಕ್ ಪಕ್ಷದ ಆಡಳಿತಕ್ಕಿಂತ ರಿಪಬ್ಲಿಕನ್ ಪಕ್ಷ ಹೆಚ್ಚು ಆಪ್ತ ಎಂಬ ಭಾವನೆ ಮೂಡಿತ್ತು. ಡೊನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ಮುಖಾಮುಖಿಯಾಗುವುದು ಪಕ್ಕಾ ಆದಾಗ, ಟ್ರಂಪ್ ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್ ಸೂಕ್ತ ವ್ಯಕ್ತಿಯಲ್ಲ ಎಂಬ ಅಪವಾದಗಳು ಕೇಳಿ ಬಂದಿದ್ದವು.

ಇನ್ನು ಅವರು ಮಾಡಿಕೊಂಡ ವಿವಾದ ಒಂದೆರಡಲ್ಲ, ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಹೆಣ್ಣುಮಕ್ಕಳ ಸಂಖ್ಯೆಯೂ ಅಪಾರ. ಸಿನಿಮಾ ನಟಿಯಿಂದ ಹಿಡಿದು ಸ್ವತಃ ಮಗಳ ಮೇಲೆಯೂ ಕಣ್ಣು ಹಾಕಿದ್ದ ಕಿಲಾಡಿ ಡೊನಾಲ್ಡ್ ಟ್ರಂಪ್. ಪ್ರಚಾರ ಭಾಷಣಗಳಲ್ಲಿ ಮುಸ್ಲಿಮರ ಬಗ್ಗೆ, ಉದ್ಯೋಗ, ವಿವಿಧ ದೇಶಗಳ ಸಂಬಂಧದ ಬಗ್ಗೆ ಅವರು ನೀಡಿದ ಹೇಳಿಕೆಗಳು ವಿವಾದ ಸೃಷ್ಠಿಸಿದ್ದವು.

ಅಂತಹ ವಿವಾದಿತ ವ್ಯಕ್ತಿಯೇ ಅಧ್ಯಕ್ಷನಾಗಬೇಕೆಂದು ಅಮೆರಿಕ ಜನರ ಬಯಕೆಯಾಗಿತ್ತು ಎನಿಸುತ್ತದೆ. ಪರಿಣಾಮ ತಮ್ಮ ತಂತ್ರಗಾರಿಕೆ ಮೂಲಕ ಆಡಳಿತ ರಾಜಕೀಯ ಹಿನ್ನಲೆ, ಅನುಭವ ಇರುವ ಹಿಲರಿ ಕ್ಲಿಂಟನ್ ರನ್ನು ಸೋಲಿಸಿ ವಿಶ್ವದ ಪ್ರಮುಖ ದೇಶದ ಚುಕ್ಕಾಣಿ ಹಿಡಿದಿದ್ದಾರೆ ಡೊನಾಲ್ಡ್ ಟ್ರಂಪ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...