alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕನ್ ಗಾಗಿ ಸ್ನೇಹಿತೆಗೆ ಗನ್ ತೋರಿಸಿದ 12 ರ ಪೋರ

nuggetscover

ಅಮೆರಿಕದಲ್ಲಿ ಗನ್ ಅಂದ್ರೆ ಆಟಿಕೆಯಂತಾಗಿಬಿಟ್ಟಿದೆ, ಮಕ್ಕಳ ಕೈಗೂ ಗನ್ ಸುಲಭವಾಗಿ ಸಿಕ್ತಾ ಇದೆ. ನ್ಯೂಯಾರ್ಕ್ ನಗರದಲ್ಲಿ 12 ವರ್ಷದ ಬಾಲಕನೊಬ್ಬ ‘ಚಿಕನ್ ಮ್ಯಾಕ್ ನಗ್ಗೆಟ್’ ಗಾಗಿ ಬಾಲಕಿಗೆ ಗನ್ ತೋರಿಸಿ ಬೆದರಿಸಿದ್ದಾನೆ. ಕಳೆದ ಮಂಗಳವಾರ ಹರ್ಲೆಮ್ ನಲ್ಲಿರೋ ‘ಮ್ಯಾಕ್ ಡೊನಾಲ್ಡ್ಸ್’ ನಲ್ಲಿ ನಡೆದ ಘಟನೆ ಇದು.

ಬಾಲಕಿ ಚಿಕನ್ ಮ್ಯಾಕ್ ನಗ್ಗೆಟ್ ತೆಗೆದುಕೊಂಡು ತಿನ್ನುತ್ತಿದ್ಲು. ತನಗೆ ಅದನ್ನು ಕೊಡುವಂತೆ ಹುಡುಗ ಕೇಳಿದ್ದಾನೆ. ಆಕೆ ಚಿಕನ್ ಕೊಡಲು ಒಪ್ಪಿಲ್ಲ. ಚಿಕನ್ ತಿಂದು ಅಲ್ಲಿಂದ ಹೊರಬಿದ್ದ ಹುಡುಗಿ ಸಬ್ ವೇ ಸ್ಟೇಶನ್ ಬಳಿ ಹೋಗ್ತಾ ಇದ್ಲು. ಅವಳನ್ನು ಬೆನ್ನಟ್ಟಿ ಬಂದ ಬಾಲಕ ಆಕೆಯ ಹಣೆಗೆ ಪಿಸ್ತೂಲ್ ನಿಂದ ಗುರಿಯಿಟ್ಟು, ಚಿಕನ್ ಕೊಡಿಸದೇ ಇದ್ರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಸಿದ್ದಾನೆ.

ಅವನ ಕೈಯಿಂದ ಗನ್ ಕಿತ್ತೆಸೆದ ಬಾಲಕಿ ಅಲ್ಲಿಂದ ತೆರಳಿದ್ದಾಳೆ. ಮರುದಿನ ನಡೆದ ಘಟನೆ ಬಗ್ಗೆ ವಿದ್ಯಾರ್ಥಿನಿ ಶಾಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ ಗನ್ ಮಾತ್ರ ಈವರೆಗೂ ಪತ್ತೆಯಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...