alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನಕ್ಕೆ ‘ದೊಡ್ಡಣ್ಣ’ನ ಶಾಕ್…!

ತನ್ನ ಎಚ್ಚರಿಕೆಯ ನಂತರವೂ ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕಾ ಶಾಕ್ ನೀಡಿದೆ. ಅಮೆರಿಕಾದ ಉಗ್ರರ ಪಟ್ಟಿಯಲ್ಲಿರುವ ಹಫೀಜ್ ಸಹೀದ್ ನೇತೃತ್ವದ ಮಿಲಿ ಮುಸ್ಲಿಂ ಲೀಗ್ ನ್ನು ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರ್ಪಡೆ ಮಾಡಿದೆ.

ಉಗ್ರ ಚಟುವಟಿಕೆಗಳ ಕಾರಣಕ್ಕಾಗಿ ಗೃಹ ಬಂಧನದಲ್ಲಿದ್ದ ಹಫೀಜ್ ಸಹೀದ್ ನನ್ನು ಪಾಕ್ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಬಿಡುಗಡೆ ಮಾಡಿದ್ದು, ಹಫೀಜ್ ಸಹೀದ್ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾನೆ. ಇದಕ್ಕೆ ಅಮೆರಿಕಾ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು, ಹಫೀಜ್ ಸಹೀದ್ ನನ್ನು ಬಿಡುಗಡೆಗೊಳಿಸಬಾರದೆಂದು ಹೇಳಿತ್ತು.

ಈ ನಡುವೆ ಹಫೀಜ್ ಸಹೀದ್ 2018 ರಲ್ಲಿ ನಡೆಯಲಿರುವ ಪಾಕಿಸ್ತಾನದ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದವಾಗಿದ್ದಾನೆಂಬ ಮಾತುಗಳು ಕೇಳಿ ಬರುತ್ತಿದ್ದು, ಈಗ ಆತನ ನೇತೃತ್ವದ ಮಿಲಿ ಮುಸ್ಲಿಂ ಲೀಗ್ ಮೇಲೆ ಅಮೆರಿಕಾ ನಿಷೇಧ ಹೇರುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...