alex Certify
ಕನ್ನಡ ದುನಿಯಾ       Mobile App
       

Kannada Duniya

‘ಸೆಕ್ಸ್ ಗುರು’– ಇದು ಸರ್ಕಾರದ ಮೊಬೈಲ್ ಆಪ್..!

ns-15

ದಕ್ಷಿಣ ಅಮೆರಿಕಾ ದೇಶ ಉರುಗ್ವೆಯಲ್ಲಿ ಹದಿಹರೆಯದವರಿಗೆ ನೀಡ್ತಾ ಇರುವ ಸ್ವಾತಂತ್ರ್ಯ ಎಲ್ಲೆ ಮೀರಿದೆ. 15-17 ವರ್ಷ ವಯಸ್ಸಿನ ಹುಡುಗಿಯರು ಗರ್ಭ ಧರಿಸುತ್ತಿರುವ ಸಂಖ್ಯೆ ಜಾಸ್ತಿಯಾಗಿದೆ. ದುರಾದೃಷ್ಟವೆಂದ್ರೆ ಈ ಹುಡುಗಿಯರಿಗೆ ಗರ್ಭಪಾತದ ದುಷ್ಪರಿಣಾಮ ಹಾಗೂ ಚಿಕ್ಕ ವಯಸ್ಸಿನಲ್ಲಿ ತಾಯಿಯಾದ್ರೆ ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತದೆನ್ನುವ ಜ್ಞಾನವಿಲ್ಲ.

ಕಡಿಮೆ ವಯಸ್ಸಿನ ಹುಡುಗಿಯರು ಗರ್ಭ ಧರಿಸುವುದನ್ನು ತಡೆಯಲು ಉರುಗ್ವೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಮೊಬೈಲ್ ಅಪ್ಲಿಕೇಷನ್ ಒಂದನ್ನು ಪ್ರಾರಂಭಿಸಿದೆ. ಇದಕ್ಕೆ ಸೆಕ್ಸ್ ಗುರು ಎಂದು ಹೆಸರಿಡಲಾಗಿದೆ. ಈ ಆಪ್ ಹದಿಹರೆಯದ ಹುಡುಗಿಯರಿಗೆ ಗರ್ಭಧಾರಣೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಮಾಹಿತಿ ನೀಡಿ, ಲೈಂಗಿಕ ಶಿಕ್ಷಣ ನೀಡ್ತಾ ಇದೆ.

ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಸುಮಾರು ಶೇಕಡಾ 17ರಷ್ಟು ನವಜಾತ ಶಿಶುಗಳ ತಾಯಂದಿರ ವಯಸ್ಸು 15-17 ವರ್ಷ. ಪ್ರತಿವರ್ಷ ಅಪ್ರಾಪ್ತ ಹುಡುಗಿಯರು 7900 ನವಜಾತ ಶಿಶುಗಳಿಗೆ ಜನ್ಮ ನೀಡುತ್ತಿದ್ದಾರಂತೆ. 1996 ರ ನಂತ್ರ ಈ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ಇದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...