alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆ ಕಾರ್ಯಕ್ರಮದಲ್ಲಿ ನಗ್ನಳಾಗಿ ನೃತ್ಯ ಮಾಡಿದ ವಿದ್ಯಾರ್ಥಿನಿ

ದಕ್ಷಿಣ ಆಫ್ರಿಕಾ ಶಾಲಾ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ವೈರಲ್ ಆಗ್ತಿದ್ದಂತೆ ವಿವಾದ ಶುರುವಾಗಿದೆ. ಈ ವಿಡಿಯೋದಲ್ಲಿ ಹದಿಹರೆಯದ ಹುಡುಗಿಯೊಬ್ಬಳು ಹಾಡುತ್ತ, ನೃತ್ಯ ಮಾಡ್ತಾ ಬಟ್ಟೆ ಬಿಚ್ಚುತ್ತಾಳೆ. ವಿಡಿಯೋ ವೈರಲ್ ಆದ್ಮೇಲೆ ಅಲ್ಲಿನ ಸರ್ಕಾರ ಹಾಗೂ ಸಂಪ್ರದಾಯವಾದಿಗಳ ಮಧ್ಯೆ ಗಲಾಟೆ ಶುರುವಾಗಿದೆ.

ಸರ್ಕಾರ ಸಂಘಟಕರ ಕ್ರಮವನ್ನು ಖಂಡಿಸಿದ್ದು, ತನಿಖೆಗೆ ಆದೇಶ ಮಾಡಿದೆ. ವೇದಿಕೆ ಮೇಲೆ ಹದಿಹರೆಯದ ಹುಡುಗಿಯೊಬ್ಬಳು ಮಾಡಿದ ನೃತ್ಯವನ್ನು ನಾವು ಖಂಡಿಸುತ್ತೇವೆಂದು ಸರ್ಕಾರ ಹೇಳಿದೆ. ದಕ್ಷಿಣ ಆಫ್ರಿಕಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅರೆ ನಗ್ನ ನೃತ್ಯಗಳು ನಡೆಯುತ್ತಿರುತ್ತವೆ. ಸಾಂಪ್ರದಾಯಿಕ ರಾಜರ ಮುಂದೆ ಹದಿಹರೆಯದ ಹುಡುಗಿಯರು ನೃತ್ಯ ಮಾಡ್ತಾರೆ.

ಸಂಪ್ರದಾಯವಾದಿಗಳು ಹುಡುಗಿ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮಗೆ ನಮ್ಮ ಸಂಸ್ಕೃತಿ ಮೇಲೆ ಹೆಮ್ಮೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದ್ರೆ ಸರ್ಕಾರ ಈ ಕ್ರಮವನ್ನು ಖಂಡಿಸಿದೆ. ಸಂಸ್ಕೃತಿ, ಸಂಪ್ರದಾಯವನ್ನು ಗೌರವಿಸುವುದು ತಪ್ಪಲ್ಲ. ಆದ್ರೆ ಹದಿಹರೆಯದ ಹುಡುಗಿಯನ್ನು ನಗ್ನಗೊಳಿಸುವುದು ತಪ್ಪೆಂದು ಸರ್ಕಾರ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...