alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆ ಉಟ್ಟು ಅದ್ಭುತ ಸಾಹಸ ಮಾಡಿದ್ದಾಳೆ ಪುಣೆ ಮಹಿಳೆ

ಮಹಿಳೆಯರು ಯಾವ ಕ್ಷೇತ್ರದಲ್ಲೂ ಪುರುಷರಿಗಿಂತ ಹಿಂದೆ ಬಿದ್ದಿಲ್ಲ. ಎಂಥ ಸಾಹಸಕ್ಕಾದ್ರೂ ಅವರು ಸೈ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ ಪುಣೆಯ ಶೀತಲ್ ರಾಣೆ. ಸಾಹಸ ಕ್ರೀಡೆಗಳಲ್ಲಿ ಶೀತಲ್ ಬಹಳ ಆಸಕ್ತಿ ಹೊಂದಿದ್ದಾರೆ.

ಇದೀಗ ಸೀರೆ ಉಟ್ಟು ಸ್ಕೈ ಡೈವಿಂಗ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಥೈಲ್ಯಾಂಡ್ ನಲ್ಲಿ ಶೀತಲ್ ಸುಂದರ ನವಾರಿ ಸೀರೆಯುಟ್ಟು ಈ ಸಾಹಸ ಮೆರೆದಿದ್ದಾರೆ. ಪಟ್ಟಾಯಾದಲ್ಲಿರೋ ವಿಶ್ವಪ್ರಸಿದ್ಧ ಪ್ರವಾಸಿ ರೆಸಾರ್ಟ್ ಈ ದಾಖಲೆಗೆ ಸಾಕ್ಷಿಯಾಗಿದೆ.

13,000 ಅಡಿ ಎತ್ತರದಲ್ಲಿ ವಿಮಾನದಿಂದ ಎರಡು ಬಾರಿ ಶೀತಲ್ ಜಂಪ್ ಮಾಡಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಹೊಸತೇನಾದ್ರೂ ಮಾಡಬೇಕು ಅನ್ನೋ ಉತ್ಸಾಹ ಶೀತಲ್ ಅವರಲ್ಲಿತ್ತು. ಹಾಗಾಗಿಯೇ ಮಹಾರಾಷ್ಟ್ರದ ಸಾಂಪ್ರದಾಯಿಕ ಸೀರೆ ಉಟ್ಟು ಈ ಸಾಹಸ ಮೆರೆದಿದ್ದಾರೆ.

ಸುಂದರವಾಗಿ ಸೀರೆ ಉಟ್ಟು ನಂತರ ಅದರ ಮೇಲಿಂದ ಸೇಫ್ಟಿ ಗೇರ್, ಕಮ್ಯೂನಿಕೇಷನ್ ಸಾಧನ, ಹೆಲ್ಮೆಟ್, ಗಾಗಲ್, ಶೂ ಎಲ್ಲವನ್ನೂ ಧರಿಸಿ ಸ್ಕೈ ಡೈವಿಂಗ್ ಮಾಡೋದು ನಿಜಕ್ಕೂ ಸವಾಲಿನ ಕೆಲಸ ಎನ್ನುತ್ತಾರೆ ಶೀತಲ್. ನಿತ್ಯ ಬದುಕಿನಲ್ಲಿ ಮಾತ್ರವಲ್ಲ ಸ್ಕೈ ಡೈವಿಂಗ್ ನಂತಹ ಸಾಹಸವನ್ನೂ ಭಾರತೀಯ ಮಹಿಳೆಯರು ಸೀರೆ ಉಟ್ಟು ಮಾಡಬಲ್ಲರು ಅನ್ನೋದನ್ನು ಸಾಧಿಸಿ ತೋರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...