alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲುತ್ತೆ ಈ ದೇಶ

ಉನ್ನಾವ್ ಹಾಗೂ ಕತುವಾ ಅತ್ಯಾಚಾರ ಪ್ರಕರಣ ದೇಶದ ಜನರು ತಲೆ ತಗ್ಗಿಸುವಂತೆ ಮಾಡಿದೆ. ಈ ಎರಡು ಪ್ರಕರಣಗಳಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆದ್ರೆ ಭಾರತದಲ್ಲಿ ಎಷ್ಟೋ ಪ್ರಕರಣಗಳು ಇನ್ನೂ ಬೆಳಕಿಗೆ ಬಂದಿಲ್ಲ. ಅತ್ಯಾಚಾರಿಗಳು ಬಿಂದಾಸ್ ಓಡಾಡಿಕೊಂಡಿದ್ದರೆ ಪೀಡಿತರ ಬದುಕು ನರಕವಾಗಿದೆ. ನಿರ್ಭಯ ಪ್ರಕರಣದ ನಂತ್ರ ದೇಶದಲ್ಲಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ಬಂದಿದೆ ನಿಜ. ಆದ್ರೆ ಅತ್ಯಾಚಾರ ಪ್ರಕರಣ ಮಾತ್ರ ಕಡಿಮೆಯಾಗಿಲ್ಲ.

ಭಾರತದಲ್ಲೊಂದೇ ಅಲ್ಲ ಬೇರೆ ಬೇರೆ ದೇಶಗಳಲ್ಲಿ ಅತ್ಯಾಚಾರಿಗಳಿಗೆ ಬೇರೆ ಬೇರೆ ಶಿಕ್ಷೆಗಳಿವೆ. ಕೆಲ ದೇಶದ ಕಾನೂನು ಅತ್ಯಾಚಾರಿಗಳಿಗೆ ನರಕ ದರ್ಶನ ಮಾಡಿಸುತ್ತದೆ.

ಇರಾಕ್ ನಲ್ಲಿ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲಾಗುತ್ತದೆ. ದೊಡ್ಡ ಅಪರಾಧ ಮಾಡಿದವರಿಗೆ ಇಲ್ಲಿನ ಕಾನೂನು ಮರಣ ದಂಡನೆ ಶಿಕ್ಷೆ ನೀಡುತ್ತದೆ. ಮಹಿಳೆಯರನ್ನು ಹಿಂಬಾಲಿಸುವುದು, ಶೋಷಣೆ ನೀಡುವವರಿಗೆ ಇಲ್ಲಿನ ಕಾನೂನಿನಲ್ಲಿ ಹೊಡೆತದ ಶಿಕ್ಷೆ ನೀಡಲಾಗುತ್ತದೆ.

ಸೌದಿಯಲ್ಲಿ ಅಪರಾಧಿಗೆ ಶಿಕ್ಷೆ ನೀಡುವ ಮೊದಲು ಅನೇಕ ಬಾರಿ ಯೋಚನೆ ಮಾಡಲಾಗುತ್ತದೆ. ಯಾಕೆಂದ್ರೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ಹೊಡೆಯಲಾಗುತ್ತದೆ. ವ್ಯಕ್ತಿ ಸಾಯುವವರೆಗೂ ಕಲ್ಲಿನಿಂದ ಹೊಡೆಯಲಾಗುತ್ತದೆ.

ಗ್ರೀಸ್ ನಲ್ಲಿ ಅತ್ಯಾಚಾರದ ಶಿಕ್ಷೆ ಭಿನ್ನವಾಗಿದೆ. ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಬಲವಂತ ಸೆಕ್ಸ್, ಸಾಮರ್ಥ್ಯಕ್ಕಿಂತ ಹೆಚ್ಚು ಸೆಕ್ಸ್ ಇವೆಲ್ಲವನ್ನೂ ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ. ಅಪರಾಧಿಗೆ ಕಠಿಣ ಶಿಕ್ಷೆ ನೀಡಿ ಜೈಲಿಗೆ ತಳ್ಳಲಾಗುತ್ತದೆ. ಜೈಲಿನಲ್ಲಿ ಅಪರಾಧಿಗಳನ್ನು ಪ್ರಾಣಿಗಳಂತೆ ನೋಡಿಕೊಳ್ಳಲಾಗುತ್ತದೆ.

ಯುನೈಟೆಡ್ ಅರಬ್ ಎಮಿರೇಟ್ನಲ್ಲಿ ಅತ್ಯಾಚಾರಿಗೆ ಬಹು ಬೇಗ ಶಿಕ್ಷೆ ನೀಡಲಾಗುತ್ತದೆ. ಪ್ರಕರಣ ನಡೆದ 7 ದಿನಗಳಲ್ಲಿ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ.

ಈಜಿಪ್ಟ್ ನಲ್ಲಿ ಕೂಡ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಶೀಘ್ರವೇ ಅಪರಾಧಿಗಳಿಗೆ ಶಿಕ್ಷೆ ನೀಡಲಾಗುತ್ತದೆ. ಕೆಲ ದಿನಗಳ ಹಿಂದೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಆರೋಪಿಗಳನ್ನು ಗಲ್ಲಿಗೇರಿಸಿತ್ತು.

ಅಪಘಾನಿಸ್ತಾನದಲ್ಲಿ ಅತ್ಯಾಚಾರ ನಡೆದು ನಾಲ್ಕು ದಿನಗಳಲ್ಲಿ ಅಪರಾಧಿಗೆ ಗುಂಡಿಕ್ಕಿ ಕೊಲೆ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...