alex Certify
ಕನ್ನಡ ದುನಿಯಾ       Mobile App
       

Kannada Duniya

ಅವಿವಾಹಿತ ಜೋಡಿಗಳಿಗಿಲ್ಲ ಹೊಟೇಲ್ ಪ್ರವೇಶ…!

ಇಂಡೋನೇಷ್ಯಾದಲ್ಲಿ ಈಗ ಹೊಸ ಕಾನೂನು ಜಾರಿಗೆ ಬಂದಿದೆ. ಮುಸ್ಲಿಂ ಧಾರ್ಮಿಕ ಕಾನೂನಾದ ಷರಿಯತ್ ನ ಅಡಿಯಲ್ಲಿ ಹೊಸ ಕಾನೂನು ಜಾರಿಗೆ ತರಲಾಗಿದೆ. ಆ ಪ್ರಕಾರ ಇನ್ಮುಂದೆ ಇಂಡೋನೇಷ್ಯಾದಲ್ಲಿ ಮದುವೆಯಾಗದ ಜೋಡಿ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಒಂದೇ ಟೇಬಲ್ ಶೇರ್ ಮಾಡುವ ಹಾಗಿಲ್ಲ.

ಇಂಡೋನೇಷ್ಯಾ ರಾಜಧಾನಿ ಜಕಾರ್ತಾದ ಮೇಯರ್ ಈ ನೂತನ ಕಾನೂನು ಪತ್ರವನ್ನ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಕುಟುಂಬದ ಇತರೆ ಸದಸ್ಯರ ಜೊತೆಯಲ್ಲಿ ಇಲ್ಲದೆ ಹೋದರೆ ಪ್ರೇಮಿಗಳು ಯಾವುದೇ ಹೊಟೇಲ್ ಅಥವಾ ರೆಸ್ಟೋರೆಂಟ್ ನಲ್ಲಿ ಒಂದೇ ಟೇಬಲ್ ನಲ್ಲಿ ಕುಳಿತುಕೊಳ್ಳುವಂತಿಲ್ಲ.

ಇದರ ಜೊತೆಗೆ ಷರಿಯತ್ ಕಾನೂನಿನ 10ನೇ ಕಾಯ್ದೆಯ ಪ್ರಕಾರ ಎಲ್ಜಿಬಿಟಿ ಕಾನೂನಿನಲ್ಲಿ ಕೂಡ ಗಮನಾರ್ಹ ಬದಲಾವಣೆಗಳನ್ನ ತರಲಾಗಿದೆ. ಸಲಿಂಗ ಕಾಮಿಗಳು, ಗೇ, ಲಿಂಗ ಪರಿವರ್ತನೆಗೆ ಒಳಪಟ್ಟವರು, ಹೊಮೋ ಸೆಕ್ಷುವಲ್ಸ್ ಜೋಡಿಗಳಿಗೂ ಈ ನಿಯಮ ಅನ್ವಯವಾಗಲಿದೆಯಂತೆ.

ಆದ್ರೆ ಈ ಕಾನೂನಿನ ಬಗ್ಗೆ ಇಂಡೋನೇಷ್ಯಾದ ಸಾಮಾಜಿಕ ಸಂಸ್ಥೆಗಳು ಮತ್ತು ಖಾಸಗಿ ವಲಯ ಆಕ್ಷೇಪ ವ್ಯಕ್ತಪಡಿಸಿದೆ. ಮಹಿಳೆಯರು ಮತ್ತು ಖಾಸಗಿ ಸ್ವಾತಂತ್ರಕ್ಕೆ ಈ ಕಾನೂನು ಅಡ್ಡಿಯುಂಟು ಮಾಡುತ್ತದೆ ಅಂತ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದ್ರೆ ಇಂಡೋನೇಷ್ಯಾದಲ್ಲಿ ಹದ್ದು ಮೀರಿ ಬೆಳೆಯುತ್ತಿರುವ ಅಪ್ರಾಪ್ತರ ಕಳ್ಳ ಸಾಗಾಣಿಕೆ ಸೇರಿದಂತೆ ಹಲವು ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಅಂತ ಸರ್ಕಾರ ಸ್ಪಷ್ಟನೆ ನೀಡಿದೆ. ಮದ್ಯಪಾನಕ್ಕೆ ದಾಸರಾಗುತ್ತಿರುವ ಯುವಜನತೆಯನ್ನ ಸರಿದಾರಿಗೆ ತರುವ ನಿಟ್ಟಿನಲ್ಲಿ ಕಠಿಣ ಕಾನೂನುಗಳನ್ನ ಷರಿಯತ್ ಮೂಲಕ ಜಾರಿಗೊಳಿಸಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...