alex Certify
ಕನ್ನಡ ದುನಿಯಾ       Mobile App
       

Kannada Duniya

ಸುಲಭ ಹಣ ಗಳಿಕೆಗೆ ವಿವಿ ವಿದ್ಯಾರ್ಥಿನಿಯರು ಮಾಡ್ತಿರೋದೇನು?

ಹಣ ಗಳಿಸಲು ಸಾವಿರಾರು ದಾರಿಗಳಿವೆ. ಕೂಲಿ ಕೆಲಸ, ವ್ಯವಹಾರ, ಕಂಪನಿ ಕೆಲಸ ಹೀಗೆ ಅನೇಕ ವಿಧದಲ್ಲಿ ಜನ ಹಣ ಗಳಿಸುತ್ತಾರೆ. ಆದರೆ ಯುರೋಪ್ ಒಕ್ಕೂಟ ರಾಷ್ಟ್ರಗಳ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರು ಹಣ ಗಳಿಸುವ ವಿಧಾನ ತಿಳಿದ್ರೆ ನಿಮ್ಮ ಕಣ್ಣು ದೊಡ್ಡದಾಗುವುದು ಗ್ಯಾರಂಟಿ.

ಹಣ ಗಳಿಸಲು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹೊಸ ವಿಧಾನ ಕಂಡು ಹಿಡಿದಿದ್ದಾರೆ. ಅದೇ ಶುಗರ್ ಡ್ಯಾಡಿ ವೆಬ್ ಸೈಟ್. ಇಲ್ಲಿ ವಿದ್ಯಾರ್ಥಿನಿಯರು ಪುರುಷರಿಗೆ ತಮ್ಮ ದೂರವಾಣಿ ಸಂಖ್ಯೆ ನೀಡಿ ತಮ್ಮ ಬಳಿ ಕರೆಯುತ್ತಾರೆ. ಅವರ ಜೊತೆ ಮಾತನಾಡುವುದು, ಅವರನ್ನು ಭೇಟಿಯಾಗುವುದು, ಊಟಕ್ಕೆ ಹೋಗುವುದು, ಒಂದು ರಾತ್ರಿ ಅವರ ಜೊತೆ ಕಳೆಯುವುದು. ಇವೆಲ್ಲದಕ್ಕೂ ಹುಡುಗಿಯರು ಹಣ ಪಡೆಯುತ್ತಾರೆ. ಇಲ್ಲಿ ಪಡೆದ ಹಣವನ್ನು ತಮ್ಮ ವಿದ್ಯಾಭ್ಯಾಸ, ಹಾಸ್ಟೆಲ್ ಫೀ, ಪುಸ್ತಕ ಖರೀದಿಗೆ ಬಳಸುತ್ತಾರೆ.

ಇಲ್ಲಿ ಲಾಗಿನ್ ಆಗುವ ಹುಡುಗಿಯರಿಗೆ ಶುಗರ್ ಬೇಬೀಸ್ ಅಂತಾ ಕರೆಯಲಾಗುತ್ತೆ. ಪ್ರತಿದಿನ ಹುಡುಗಿಯರು ಸುಮಾರು 3 ಸಾವಿರ ಯೂರೋವನ್ನು ಗಳಿಸುತ್ತಾರೆ ಎಂದು ಅಂಕಿ- ಅಂಶ ಹೇಳುತ್ತಿದೆ. ದಿನದಿಂದ ದಿನಕ್ಕೆ ಈ ವೆಬ್ ಸೈಟ್ ಗೆ ಬರುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಎಷ್ಟು ಸರಿ ಎಂಬ ವಿಮರ್ಶೆ ಅವರಿಗೆ ಬೇಡವಂತೆ. ಕೆಲಸ ಹಾಗೂ ವಿದ್ಯಾಭ್ಯಾಸ ಎರಡನ್ನೂ ಮಾಡುವುದು ಕಷ್ಟ ಎನ್ನುವ ಅವರು, ಹಣ ಗಳಿಸಲು ಇದು ಸುಲಭ ಮಾರ್ಗ ಎನ್ನುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...