alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಯುವಕ, ಯುವತಿ ಜೊತೆಗಿರುವಂತಿಲ್ಲ

pak

ಲಾಹೋರ್: ಕಾಲೇಜ್ ಎಂದ ಮೇಲೆ ಯುವಕ, ಯುವತಿಯರು ಜೊತೆಯಾಗಿ ಪಾಠ ಕೇಳುವುದು, ಓದುವುದು, ಚರ್ಚೆ ನಡೆಸುವುದು ಕಾಮನ್. ಅದರಲ್ಲಿಯೂ, ವಿಶ್ವ ವಿದ್ಯಾನಿಲಯ ಎಂದ ಮೇಲೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪ್ರಬುದ್ಧರಾಗಿರುತ್ತಾರೆ.

ಪಾಕಿಸ್ತಾನದ ಸರ್ಗೋದ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಯುವಕ, ಯುವತಿ ಜೊತೆಯಾಗಿ ಕುಳಿತುಕೊಳ್ಳುವುದನ್ನು ನಿಷೇಧಿಸಲಾಗಿದೆ. ಯುವಕ, ಯುವತಿ ಜೊತೆಯಾಗಿ ಕುಳಿತುಕೊಳ್ಳುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಇದು ನೈತಿಕ ಪೊಲೀಸ್ ಗಿರಿಗೆ ಕಾರಣವಾಗಬಹುದೆಂದು ಮುಂಜಾಗ್ರತೆ ಕ್ರಮವಾಗಿ ಲಾಹೋರ್ ನಲ್ಲಿರುವ ಸರ್ಗೋದ ವಿಶ್ವವಿದ್ಯಾಲಯದಲ್ಲಿ ಯುವಕ, ಯುವತಿ ಜೊತೆಗಿರುವುದಕ್ಕೆ ನಿರ್ಬಂಧ ಹೇರಲಾಗಿದೆ.

ವಿವಿ ಕ್ಯಾಂಪಸ್ ನಲ್ಲಿರುವಾಗ ಜೊತೆಗಿರುವಂತಿಲ್ಲ. ತರಗತಿ, ಕ್ಯಾಂಟೀನ್ ಸೇರಿದಂತೆ ವಿವಿಯ ಕ್ಯಾಂಪಸ್ ಒಳಗೆ ಯಾರೂ, ಜೊತೆಯಾಗಿ ಕಾಣಿಸಿಕೊಳ್ಳಬಾರದೆಂದು ತಾಕೀತು ಮಾಡಲಾಗಿದೆ. ಪೋಷಕರಿಂದ ದೂರು ಕೇಳಿಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...