alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ 26 ದಿನಗಳಿಂದ ಮಲವಿಸರ್ಜನೆ ಮಾಡಿಲ್ಲ ಖೈದಿ

ಲಂಡನ್ ನಲ್ಲಿ 26 ದಿನಗಳಿಂದ ಆರೋಪಿಯೊಬ್ಬ ಶೌಚಾಲಯಕ್ಕೆ ಹೋಗಿಲ್ಲ. ಮಲ ವಿಸರ್ಜನೆ ಮಾಡಿದ್ರೆ ಡ್ರಗ್ಸ್ ಬಗ್ಗೆ ಸಾಕ್ಷಿ ಸಿಗುತ್ತೆ ಎನ್ನುವ ಕಾರಣಕ್ಕೆ ಶೌಚಾಲಯಕ್ಕೆ ಹೋಗ್ತಿಲ್ಲ. ಇದು ಪೊಲೀಸರ ತಲೆ ನೋವಿಗೆ ಕಾರಣವಾಗಿದೆ.

ಜನವರಿ 17ರಂದು ಪೊಲೀಸರು ಎ ಕ್ಲಾಸ್ ಡ್ರಗ್ಸ್ ಸರಬರಾಜು ಆರೋಪದ ಹಿನ್ನೆಲೆಯಲ್ಲಿ 24 ವರ್ಷದ ಲಾಮರ್ ಚೇಂಬರ್ಸ್ ನನ್ನು ಬಂಧಿಸಿದ್ದರು. ಈ ವೇಳೆ ಕೈನಲ್ಲಿದ್ದ ಎ ಕ್ಲಾಸ್ ಡ್ರಗ್ಸನ್ನು ಲಾಮರ್ ನುಂಗಿದ್ದ. ಅಲ್ಲಿಂದ ಲಾಮರ್ ಮಲ ವಿಸರ್ಜನೆ ಮಾಡಿಲ್ಲ. ಈ ಮೂಲಕ 23 ದಿನಗಳ ಕಾಲ ಶೌಚಾಲಯಕ್ಕೆ ಹೋಗದ ಖೈದಿಯೊಬ್ಬನ ದಾಖಲೆಯನ್ನು ಲಾಮರ್ ಮುರಿದಿದ್ದಾನೆ.

ಇದೇ ವಿಚಾರಕ್ಕೆ ಸಂಬಧಿಸಿದಂತೆ ಪೊಲೀಸರು ಟ್ವೀಟರ್ ನಲ್ಲಿ ಸಹಾಯ ಕೇಳಿದ್ದಾರೆ. #PooWatch ಟ್ವೀಟರ್ ನಲ್ಲಿ ಆರೋಪಿ ಶೌಚಾಲಯಕ್ಕೆ ಹೋಗಲು ಏನು ಮಾಡಬೇಕೆಂದು ಸಲಹೆ ಕೇಳಿದ್ದಾರೆ. ಫೈಬರ್ ಯುಕ್ತ ಹಣ್ಣು ಹಾಗೂ ತರಕಾರಿಗಳನ್ನು ಕೆಲವರು ನೀಡಿದ್ದರು ಎನ್ನಲಾಗಿದೆ. ಆದ್ರೆ ಪೊಲೀಸರು ಖೈದಿಗೆ ನೀಡಿಲ್ಲ. 26 ದಿನಗಳಿಂದ ಶೌಚಕ್ಕೆ ಹೋಗದ ವ್ಯಕ್ತಿ ಎಲ್ಲರ ಕೇಂದ್ರಬಿಂದುವಾಗಿದ್ದಾನೆ. ಆತ ಏನನ್ನೂ ಸೇವನೆ ಮಾಡ್ತಿಲ್ಲ. ಆತ ಮಲವಿಸರ್ಜನೆ ಮಾಡುವವರೆಗೂ ಆತನನ್ನು ಬಿಡುಗಡೆ ಮಾಡುವುದಿಲ್ಲವೆಂದು ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...