alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಸ್ ಜೊತೆ ಡೇಟ್ ಗೆ ಹೋಗಿ ಕೆಲಸ ಗಿಟ್ಟಿಸಿಕೊಂಡ್ರೆ ಸಿಗುತ್ತೆ 67 ಲಕ್ಷ ಸಂಬಳ

ಬಾಸ್ ಜೊತೆ ಡೇಟ್ ಗೆ ಹೋದ್ರೆ ಸಿಗುತ್ತೆ ನೌಕರಿ. ಇದನ್ನು ಓದಿದ್ರೆ ಆಶ್ಚರ್ಯವಾಗೋದು ನಿಶ್ಚಿತ. ಇಂಥ ಆಫರ್ ನಿಮ್ಮ ಮುಂದಿಟ್ರೆ ನೀವು ಇದನ್ನು ನಿರಾಕರಿಸಬಹುದು. ಆದ್ರೆ ಅಮೆರಿಕಾ ಕಂಪನಿಯೊಂದು ಬಾಸ್ ಜೊತೆ ಡೇಟಿಂಗ್ ಹೋಗುವ ಅಭ್ಯರ್ಥಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ತಿದೆ.

ಅಮೆರಿಕಾ ಮೂಲದ ಈ ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬಾಸ್ ಜೊತೆ ಡೇಟಿಂಗ್ ಹೋಗಬೇಕೆನ್ನುವ ಷರತ್ತು ವಿಧಿಸಲಾಗುತ್ತದೆ. ಇದಕ್ಕೆ ಒಪ್ಪಿದ್ರೆ ಮಾತ್ರ ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಅಭ್ಯರ್ಥಿಗಳ ಸಾಮರ್ಥ್ಯ ತಿಳಿಯಬಹುದು ಎನ್ನುತ್ತೆ ಕಂಪನಿ.

ಈ ಕಂಪನಿ ಹೆಸರು ಹಿಂಜ್. ಇದೊಂದು ಡೇಟಿಂಗ್ ಕಂಪನಿ. ಫೇಸ್ಬುಕ್ ಹಾಗೂ ಟಿಂಡರ್ ಗೆ ಟಕ್ಕರ್ ನೀಡಲು ಈ ಕಂಪನಿ ಶುರು ಮಾಡಲಾಗಿದೆ. ಇಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಸಂಬಂಧದ ಬಗ್ಗೆ ತಿಳಿದಿರಬೇಕು ಹಾಗೆ ಸಂವಹನ ಚೆನ್ನಾಗಿರಬೇಕೆಂಬ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿದೆ.

ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಂಪನಿ 67 ಲಕ್ಷ ರೂಪಾಯಿ ನೀಡ್ತಿದೆ. ಇದ್ರ ಜೊತೆಗೆ ರೆಸ್ಟೋರೆಂಟ್ ಹಾಗೂ ಬಾರ್ ನ ಖರ್ಚನ್ನು ಕೂಡ ಕೊಡುತ್ತದೆ. ಡೇಟಿಂಗ್, ಸಂವಹನ ಚೆನ್ನಾಗಿದೆ ನಾನೂ ಅರ್ಜಿ ಸಲ್ಲಿಸುತ್ತೇನೆಂದುಕೊಂಡ್ರೆ ಅದು ಸುಲಭವಲ್ಲ. ಈ ಕಂಪನಿ ರಿಲೇಷನ್ಶಿಪ್ ನಲ್ಲಿ ಪಿಹೆಚ್ಡಿ ಮಾಡಿದವರಿಗೆ ಮಾತ್ರ ಕೆಲಸ ಕೊಡ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...