alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆಗೆ ಮನೆ ಕೇಳಿದ್ರೆ ಹಾಸಿಗೆಗೆ ಕರೆದ ಮಾಲೀಕ…!

ಬ್ರಿಟನ್ ನಲ್ಲಿ ಬಾಡಿಗೆಗೆ ಮನೆ ಕೊಡಲು ತನ್ನ ಜೊತೆ ಸೆಕ್ಸ್ ಮಾಡುವಂತೆ ಆಫರ್ ನೀಡಿದ ಮನೆ ಮಾಲೀಕನ ದುರ್ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರತಿ ತಿಂಗಳು 650 ಪೌಂಡ್ ಗೆ ಮನೆ ಬಾಡಿಗೆಗೆ ಕೊಡುವುದಾಗಿ ಆತ ಜಾಹೀರಾತು ನೀಡಿದ್ದ. ಸಿಯಾನ್ ಥಾಮಸ್ ಎಂಬ  ವರದಿಗಾರ್ತಿಯೊಬ್ಬಳು ಮನೆ ಮಾಲೀಕನ ಅಸಲಿಯತ್ತನ್ನು ಬಯಲಿಗೆಳೆದಿದ್ದಾಳೆ.

ರೆಸ್ಟೋರೆಂಟ್ ಒಂದರಲ್ಲಿ ಮನೆ ಮಾಲೀಕನನ್ನು ಭೇಟಿಯಾದ ಸಿಯಾನ್, ತನಗೆ ಬಾಡಿಗೆಗೆ ಮನೆ ಬೇಕು ಅಂತಾ ಹೇಳಿದ್ದಾಳೆ. ವಾರದಲ್ಲಿ ಒಂದು ದಿನ ತನ್ನ ಜೊತೆಗೆ ಸೆಕ್ಸ್ ಮಾಡಿದ್ರೆ ಡೆಪಾಸಿಟ್ ಹಾಗೂ ಬಾಡಿಗೆ ಎರಡನ್ನೂ ಕಡಿಮೆ ಮಾಡೋದಾಗಿ ಮನೆ ಮಾಲೀಕ ಆಫರ್ ಕೊಟ್ಟಿದ್ದಾನೆ. ಇವೆಲ್ಲವೂ ಸಿಯಾನ್ ಬಳಿಯಿದ್ದ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಂತರ ಐಟಿವಿ ವೇಲ್ಸ್ ನಲ್ಲಿ ಈ ಸ್ಟಿಂಗ್ ಆಪರೇಶನ್ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಅದನ್ನು ಪ್ರಸಾರ ಮಾಡದಂತೆ ಬೇಡಿಕೊಂಡು ಮನೆ ಮಾಲೀಕ ಇ ಮೇಲ್ ಕೂಡ ಕಳಿಸಿದ್ದ. ಸದ್ಯ ಸೆಕ್ಸ್ ಫಾರ್ ರೆಂಟ್ ಬ್ರಿಟನ್ ನಲ್ಲಿ ಹೊಸ ಟ್ರೆಂಡ್ ಆಗಿರೋದ್ರಿಂದ ಅದನ್ನು ಅಪರಾಧವೆಂದು ಪರಿಗಣಿಸುತ್ತಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...