alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯ ಗುದನಾಳದೊಳಗಿತ್ತು ಗಾಜಿನ ಲೋಟ…!

ವೈದ್ಯಲೋಕವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಚೀನಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನ ಗುದನಾಳದೊಳಕ್ಕೆ 8 ಸೆಮೀ ಉದ್ದದ ಗಾಜಿನ ಲೋಟವೊಂದು ಸಿಕ್ಕಿಹಾಕಿಕೊಂಡಿತ್ತು.

ಎರಡು ದಿನಗಳಿಂದ ಆತನಿಗೆ ಹಿಂಭಾಗದಲ್ಲಿ ವಿಪರೀತ ನೋವಿತ್ತು. ಏನೋ ಸಿಕ್ಕಿಹಾಕಿಕೊಂಡಂತೆ ಅನಿಸುತ್ತಿತ್ತು. ನೋವು ತಾಳಲಾಗದೆ ಆತ ವೈದ್ಯರ ಬಳಿ ಬಂದಿದ್ದಾನೆ. ಎಕ್ಸ್ ರೇ ಮಾಡಿದಾಗ ಹಿಂಬದಿಯ ಪ್ಯಾಸೇಜ್ ನಲ್ಲಿ ಸಿಲುಕಿದ್ದ ಗ್ಲಾಸ್ ಪತ್ತೆಯಾಗಿದೆ. ಆತನ ಗುದನಾಳದಲ್ಲಿನ ಒತ್ತಡದಿಂದ ಗಾಜಿನ ಲೋಟ ಒಡೆದು ಹೋಗುವ ಅಪಾಯವೂ ಇತ್ತು.

ಆದ್ರೆ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಗಾಜಿನ ಲೋಟವನ್ನು ಹೊರತೆಗೆದಿದ್ದಾರೆ. ಆರಂಭದಲ್ಲಿ ಗುದನಾಳದ ಮೂಲಕವೇ ಕಪ್ ಅನ್ನು ಹೊರತೆಗೆಯಲು ವೈದ್ಯರು ಪ್ರಯತ್ನಿಸಿದ್ರು. ಆದ್ರೆ ಅದು ವಿಪರೀತ ಜಾರುತ್ತಿತ್ತು, ಜೊತೆಗೆ ಒಡೆದು ಹೋಗುವ ಸಾಧ್ಯತೆಯೂ ಇತ್ತು.

ಹಾಗಾಗಿ ನಂತರ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕವೇ ಗಾಜಿನ ಲೋಟವನ್ನು ಹೊರತೆಗೆದಿದ್ದಾರೆ. ಗುದನಾಳದಲ್ಲಿ ಲೋಟ ಸಿಕ್ಕಿಹಾಕಿಕೊಂಡಿದ್ರಿಂದ ಆ ವ್ಯಕ್ತಿಗೆ ಎರಡು ದಿನಗಳಿಂದ ಮಲ ವಿಸರ್ಜನೆ ಮಾಡಲು ಕೂಡ ಸಾಧ್ಯವಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...