alex Certify
ಕನ್ನಡ ದುನಿಯಾ       Mobile App
       

Kannada Duniya

ಅಲ್ಟ್ರಾಸೌಂಡ್ ಬದಲಾಯಿಸ್ತು ತಾಯಿಯ ಬದುಕು

ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗ ಬಯಸ್ತಾಳೆ. ಹಾಗೆ ಅಮೆರಿಕಾದ ರಾಜ್ಯ ಇಂಡಿಯಾನಾದಲ್ಲಿ ವಾಸವಾಗಿರುವ ಸಾರಾ ಇಂಬರಿಯೊವಿಕ್ಜ್ ಕೂಡ ತಾಯಿಯಾಗುವ ಕನಸು ಕಂಡಿದ್ದಳು. ಮದುವೆಯಾಗಿ ಮೂರು ವರ್ಷವಾದ್ರೂ ಸಾರಾಗೆ ತಾಯಿ ಭಾಗ್ಯ ಸಿಕ್ಕಿರಲಿಲ್ಲ. ಆದ್ರೀಗ ಸಾರಾ 7 ಮಕ್ಕಳ ತಾಯಿ.

ಮೂರು ವರ್ಷದ ನಂತ್ರ ಸಾರಾ ಐವಿಎಫ್ ಸಹಾಯದ ಮೂಲಕ ಗರ್ಭ ಧರಿಸಿದ್ಲು. ಮೊದಲ ಬಾರಿ ಸಾರಾ ಗಂಡು ಮಗುವಿಗೆ ಜನ್ಮ ನೀಡಿದ್ಲು. ಎರಡನೇ ಬಾರಿ ಮೂರು ಗಂಡು ಮಕ್ಕಳ ತಾಯಿಯಾದ್ಲು ಸಾರಾ. ಆದ್ರೆ ಸಾರಾ ಹೆಣ್ಣು ಮಗು ಬೇಕೆಂಬ ಕಾರಣಕ್ಕೆ ಮತ್ತೊಮ್ಮೆ ಐವಿಎಫ್ ಮೂಲಕ ಗರ್ಭ ಧರಿಸಿದ್ಲು.

ಈ ವೇಳೆ ಗರ್ಭಧಾರಣೆ ಸ್ವಲ್ಪ ಕಠಿಣವಾಗಿತ್ತು. ಆದ್ರೆ ವೈದ್ಯರ ಪ್ರಯತ್ನದಿಂದ ಸಾರಾ ಮೂರನೇ ಬಾರಿ ಗರ್ಭಿಣಿಯಾದ್ಲು. ಅಲ್ಟ್ರಾಸೌಂಡ್ ಕೇಳಿದ ವೈದ್ಯರು ಕೂಡ ಆಶ್ಚರ್ಯಗೊಂಡಿದ್ದರು. ಈ ವೇಳೆ ಸಾರಾ ಗರ್ಭದಲ್ಲಿ ಮೂರು ಹೆಣ್ಣು ಭ್ರೂಣ ಬೆಳೆಯುತ್ತಿತ್ತು. ಈ ವಿಷ್ಯ ತಿಳಿದ ಸಾರಾ ದಂಪತಿ ಖುಷಿಯಲ್ಲಿ ತೇಲಾಡಿದ್ರು. ಈಗ ಸಾರಾ ದಂಪತಿಗೆ ಒಟ್ಟೂ 7 ಮಕ್ಕಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...