alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಕದ ಮನೆಯವರು ಸ್ಪೈಸಿ ಅಡುಗೆ ಮಾಡಿದ್ದಕ್ಕೆ ಕೇಸ್

UK woman sues neighbours for cooking spicy food

ಸಾಮಾನ್ಯವಾಗಿ ನೆರೆಹೊರೆಯ ಮಹಿಳೆಯರು ಅಡಿಗೆಯ ಬಗ್ಗೆ ಚರ್ಚೆ ಮಾಡುವುದನ್ನು ನೋಡಿರುತ್ತೀರಿ. ಅದೇ ಅಡಿಗೆಯೇ ಇಲ್ಲೊಬ್ಬ ಮಹಿಳೆಯ ಕೋಪಕ್ಕೆ ಕಾರಣವಾಗಿದೆ.

ಯುನೈಟೆಡ್ ಕಿಂಗ್ಡಂ ನ ಮಹಿಳೆಯೊಬ್ಬಳು ಪಕ್ಕದ ಮನೆಯವರು ಖಾರದ ಅಡಿಗೆ ಮಾಡುತ್ತಾರೆ. ಇದರಿಂದ ನನಗೆ ಉಸಿರಾಡಲು ತೊಂದರೆಯಾಗಿ, ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗಿದೆ ಎಂದು ನ್ಯಾಯಾಲಯದಲ್ಲಿ ದೂರು ನೀಡಿದ್ದಾಳೆ.

ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಜೋವನ್ನಾ ಲೂಸಿ ಕ್ರಿಡ್ಲಿನ್, ಪ್ರಾಣಿ ಹಕ್ಕುಗಳ ಪ್ರಚಾರಕಿಯಾಗಿದ್ದು, ತನಗೆ ನೆರೆಮನೆಯಿಂದ ಮಸಾಲೆಯ ಕಟುವಾದ ವಾಸನೆ ಬರುತ್ತದೆ ಎಂದು ದೂರಿದ್ದಾಳೆ.

ಈ ರೀತಿ ಮೆಣಸಿನಕಾಯಿಯ ಕಟುವಾದ ಹೊಗೆ ಉಸಿರಾಟದ ತೊಂದರೆಯನ್ನು ಕೊಡುತ್ತದೆ. ಇದರಿಂದ ನನಗೆ ನಿದ್ದೆಯೂ ಸರಿಯಾಗಿ ಬರುತ್ತಿಲ್ಲ. ಈ ರೀತಿಯ ವರ್ತನೆ ‘ಸಮಾಜ ವಿರೋಧಿ ಚಟುವಟಿಕೆ’ಯಾಗಿದೆ. ಕೂಡಲೇ ನ್ಯಾಯಾಲಯ ಇದಕ್ಕೆ ಪ್ರತಿಕ್ರಯಿಸಬೇಕೆಂದು ಕ್ರಿಡ್ಲಿನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...