alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು ಮಹಿಳೆ ಮಾಡಿದ ಆ ಕೃತ್ಯ

ಲಂಡನ್: ಈಗಾಗಲೇ ಭಯೋತ್ಪಾದಕ ದಾಳಿ, ಆತ್ಮಾಹುತಿ ದಾಳಿಯ ಬಿಸಿ ತಟ್ಟಿರುವ ಪಾಶ್ಚಿಮಾತ್ಯ ದೇಶಗಳು ಇದೀಗ ಬಹಳ ಜಾಗರೂಕವಾಗಿವೆ. ಅದರಲ್ಲೂ ಕತ್ತಿ, ಚೂರಿಗಳಲ್ಲೇ ಭಯೋತ್ಪಾದಕರ ಕುಕೃತ್ಯಗಳನ್ನು ಕಂಡಿರುವ ಗ್ರೇಟ್ ಬ್ರಿಟನ್ ಅಂತೂ ಈ ಬಗ್ಗೆ ಹೈಅಲರ್ಟ್ ಘೋಷಿಸಿದೆ.

ಇತ್ತೀಚೆಗೆ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನನ್ನು ಬೀದಿಯುದ್ದಕ್ಕೂ ಅಟ್ಟಾಡಿಸಿ ಕೊಲೆಗೆ ಯತ್ನಿಸಿದ ಘಟನೆಯಂತೂ ಪೊಲೀಸರನ್ನ ಅಕ್ಷರಶಃ ಬೆಚ್ಚಿ ಬೀಳಿಸಿತ್ತು. 28 ರ ಹರೆಯದ ಆ ಮಹಿಳೆ ಯಾವುದಾದರೂ ಭಯೋತ್ಪಾದಕ ಸಂಘಟನೆಗೆ ಸೇರಿದವಳೇ ಎಂದು ತಲೆ ಕೆಡಿಸಿಕೊಂಡಿದ್ದರು.

ಅಂದು ನಡೆದದ್ದಿಷ್ಚು: ಮಹಿಳೆಯೊಬ್ಬರು ಸುಮಾರು ಒಂದು ಫೀಟ್ ಉದ್ದದ ಚೂರಿಯನ್ನು ಹಿಡಿದುಕೊಂಡು “ಕಿಲ್, ಕಿಲ್, ಕಿಲ್” ಎಂದು ಬೊಬ್ಬಿರಿಯುತ್ತಾ ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಇರಿದಿದ್ದಳು. ಅದೃಷ್ಟವಶಾತ್ ಪೊಲೀಸರು ಆ ಸಮಯಕ್ಕೆ ಸರಿಯಾಗಿ ಸ್ಥಳಕ್ಕಾಗಮಿಸಿದ್ದರಿಂದ ಆಕೆ ಸೆರೆ ಹಿಡಿಯಲ್ಪಟ್ಟು ಗಾಯಾಳು ಬಚಾವಾಗಿದ್ದ.

ಆಕೆ ಚೂರಿಯೊಂದಿಗೆ ಓಡುತ್ತಿದ್ದಾಗ ಎದುರು ಸಿಕ್ಕವರೆಲ್ಲ ಈಕೆ ಭಯೋತ್ಪಾದಕಿಯೇ ಇರಬೇಕೆಂದು ಬೆದರಿ ಚೆಲ್ಲಾಪಿಲ್ಲಿಯಾಗಿದ್ದರು. ಘಟನೆಯ ಬಳಿಕ ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬೊಬ್ಬರು ಒಂದೊಂದು ವಿವರಣೆ ನೀಡುತ್ತಿರಬೇಕಾದರೆ ಪೊಲೀಸರಿಗೂ ಅಕ್ಷರಶಃ ತಲೆ ಕೆಟ್ಟಿತ್ತು. ಆದರೆ ಕೊನೆಗೂ ಆಕೆ ಭಯೋತ್ಪಾದಕಿಯಲ್ಲ, ಯಾವ ಉಗ್ರಗಾಮಿ ಸಂಘಟನೆಗೂ ಸೇರಿದವಳಲ್ಲ. ಆಕೆ ಕೇವಲ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ. ಆಕೆ ಹೀಗೆ ಮಾಡಿದ್ದಕ್ಕೆ ಕಾರಣ ಈವರೆಗೆ ತಿಳಿದುಬಂದಿಲ್ಲವಾದರೂ ಭಯೋತ್ಪಾದಕಿಯಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರುವ ಪೊಲೀಸರು ಸದ್ಯಕ್ಕೆ ನಿರುಮ್ಮಳರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...