alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಮೇಲಿನ ಕೋಪಕ್ಕೆ ಹಸುಗೂಸಿನ ಕೈ ಮುರಿದ್ಲು ಯುವತಿ

baby-hand

ಲಂಡನ್ ನಲ್ಲಿ ಬೇಬಿ ಸಿಟ್ಟಿಂಗ್ ನಡೆಸ್ತಾ ಇದ್ದ ಯುವತಿಯೊಬ್ಳು ಬಾಯ್ ಫ್ರೆಂಡ್ ಮೇಲಿನ ಕೋಪದಲ್ಲಿ ಮೂರು ತಿಂಗಳ ಪುಟ್ಟ ಮಗುವಿನ ಕೈಗಳನ್ನು ತಿರುಚಿ ಮುರಿದು ಹಾಕಿದ್ದಾಳೆ. 20 ವರ್ಷದ ಯುವತಿ ಲೂಸಿ ಹೌರಾತ್ ತನ್ನ ಗೆಳೆಯನ ಜೊತೆ ಜಗಳವಾಡಿದ್ಲು. ಅದೇ ಸಿಟ್ಟನ್ನು ಪುಟ್ಟ ಕಂದನ ಮೇಲೆ ತೋರಿಸಿದ್ದಾಳೆ.

ಗ್ರೇಟರ್ ಮ್ಯಾಂಚೆಸ್ಟರ್ ನಲ್ಲಿರೋ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿರೋ ಲೂಸಿಯನ್ನು ಪೊಲೀಸರು ಬಂಧಿಸಿದ್ದಾರೆ. 3 ತಿಂಗಳ ಆ ಗಂಡು ಮಗು ಒಂದೇ ಸಮನೆ ಅಳುತ್ತಿತ್ತು. ಬಲಗೈಯನ್ನು ಅಲ್ಲಾಡಿಸುತ್ತಲೇ ಇರಲಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು.

ಮಗುವನ್ನು ಪರೀಕ್ಷಿಸಿದ ವೈದ್ಯರು ಬಲಗೈ ಫ್ರಾಕ್ಚರ್ ಆಗಿರೋದಾಗಿ ತಿಳಿಸಿದ್ರು. ಅಷ್ಟೇ ಅಲ್ಲ ಇದು ಆಕಸ್ಮಿಕವಾಗಿ ಆಗಿದ್ದಲ್ಲ ಅನ್ನೋದನ್ನು ಕೂಡ ಸ್ಪಷ್ಟಪಡಿಸಿದ್ರು. ನಂತರ ಮಗುವಿನ ಪೋಷಕರು ಲೂಸಿ ವಿರುದ್ಧ ಪ್ರಕರಣ ದಾಖಲಿಸಿದ್ರು. ಆದ್ರೆ ಆರೋಪವನ್ನು ಅಲ್ಲಗಳೆಯುತ್ತಲೇ ಬಂದ ಲೂಸಿ ಅದು ಆಕಸ್ಮಿಕವಾಗಿ ಆದ ಅವಘಡ ಅಂತಾ ವಾದಿಸಿದ್ಲು.

ಘಟನೆ ನಡೆದ ಸಮಯದಲ್ಲಿ ಲೂಸಿ ಮಾನಸಿಕವಾಗಿ ಸ್ಥಿಮಿತದಲ್ಲಿರಲಿಲ್ಲ ಅಂತಾ ಆಕೆಯ ಪರ ವಕೀಲರು ಹೇಳಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಲೂಸಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...