alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳು ಚೆನ್ನಾಗಿ ಓದಲು ಸಹಕರಿಸುವ ಚಪ್ಪಲಿ..!

school

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ಬೂಟು ಧರಿಸಿ ಶಾಲೆಗೆ ಬರ್ತಾರೆ. ಬಹುತೇಕ ಎಲ್ಲಾ ಸ್ಕೂಲ್ ಗಳಲ್ಲೂ ಇದೇ ನಿಯಮವಿದೆ. ಆದ್ರೆ ಬ್ರಿಟನ್ ನ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳಿಗೆ ಚಪ್ಪಲಿ ಧರಿಸಿ ತರಗತಿಗೆ ಬರಲು ಅವಕಾಶ ನೀಡಲಾಗಿದೆ.

ಶೂ ಬದಲು ಸ್ಲಿಪ್ಪರ್ ಧರಿಸಿ ಬಂದ್ರೆ ಮಕ್ಕಳು ಶಾಂತವಾಗಿ, ಆರಾಮಾಗಿ ಕುಳಿತು ಪಾಠ ಆಲಿಸ್ತಾರೆ, ಇದರಿಂದ ಕಲಿಕಾ ಗುಣಮಟ್ಟವೂ ಸುಧಾರಿಸುತ್ತದೆ ಅನ್ನೋದು ಶಾಲಾ ಆಡಳಿತ ಮಂಡಳಿಯ ಅಭಿಪ್ರಾಯ. ಚಪ್ಪಲಿ ಧರಿಸಿ ತರಗತಿಗೆ ಬರಲು ಅವಕಾಶ ನೀಡಿದ್ರಿಂದ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರಂತೆ, ಜೊತೆಗೆ ಕೆಲ ಶಿಕ್ಷಕರು ಕೂಡ ಸ್ಲಿಪ್ಪರ್ ತೊಟ್ಟು ಕ್ಲಾಸ್ ರೂಮಿಗೆ ಬರ್ತಿದ್ದಾರೆ.

ಬೋರ್ನ್ಮೌತ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಪ್ರಕಾರ ವಿದ್ಯಾರ್ಥಿಗಳು ಬೂಟು ಬಿಚ್ಚಿಟ್ಟು ತರಗತಿಯಲ್ಲಿ ಕುಳಿತರೆ ಆ ಪರಿಸರ ತುಂಬಾ ಶಾಂತವಾಗಿ, ಉಲ್ಲಾಸಮಯವಾಗಿ ಇರುತ್ತದೆ. ಅಷ್ಟೇ ಅಲ್ಲ ಚಪ್ಪಲಿ ಧರಿಸಿ ಮಕ್ಕಳು ಬೇಗನೆ ಶಾಲೆಗೆ ಬಂದು, ತರಗತಿ ಮುಗಿಸಿ ಬೇಗ ಮನೆಗೆ ಮರಳಿ ಹೋಮ್ ವರ್ಕ್ ಹಾಗೂ ಸ್ಟಡಿಗೆ ಹೆಚ್ಚಿನ ಸಮಯ ಮೀಸಲಾಗಿಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...