alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಸುದ್ದಿಯಲ್ಲಿದೆ ಲಂಡನ್ ರಾಜಕುಮಾರಿಯ ಟಾಪ್ ಲೆಸ್ ಫೋಟೋ

LONDON, UNITED KINGDOM - JUNE 3: (EDITORIAL USE ONLY) In this handout image supplied by St James's Palace, Prince William, Duke of Cambridge and Catherine, Duchess of Cambridge pose for the official tour portrait for their trip to Canada and California in the Garden's of Clarence House on June 3, 2011 in London. England. The newly married Royal Couple will be undertaking their first official joint tour to Canada and California from June 30th. The trip will begin with Canada Celebrations in Ottawa and include highlights such as the Calgary Stampede and a visit to Yellowknife. (Photo by Chris Jackson / Getty Images for St James's Palace)

ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಪತ್ನಿ ಕೇಟ್ ಮಿಡ್ಲಟನ್ ಅವರ ಟಾಪ್ ಲೆಸ್ ಫೋಟೋ ಪ್ರಕಟಿಸಿದ್ದಕ್ಕೆ 1.5 ಮಿಲಿಯನ್ ಯುರೋಸ್ ಪರಿಹಾರ ನೀಡುವಂತೆ ದಂಪತಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ರಾಜಮನೆತನದ ಗೌಪ್ಯತೆಗೆ ಧಕ್ಕೆ ತಂದ 6 ಮಾಧ್ಯಮ ಪ್ರತಿನಿಧಿಗಳು ಕೂಡ ಹಾಜರಿದ್ರು.

ಫ್ರಾನ್ಸ್ ನ ಮ್ಯಾಗಜೀನ್ ‘ಕ್ಲೋಸರ್’, ದಿನಪತ್ರಿಕೆ ‘ಲಾ ಪ್ರೊವೆನ್ಸ್’ 2012ರ ಸೆಪ್ಟೆಂಬರ್ ನಲ್ಲಿ ಕೇಟ್ ಮಿಡ್ಲ್ ಟನ್ ಅವರ ಟಾಪ್ ಲೆಸ್ ಫೋಟೋಗಳನ್ನು ಪ್ರಕಟಿಸಿದ್ದವು. ಮಾಧ್ಯಮಗಳ ಈ ಕೃತ್ಯ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರಿಂದ ರಾಜಮನೆತನದ ಗೌರವಕ್ಕೆ ಧಕ್ಕೆ ಬಂದಿದ್ದು, ವಿಲಿಯಮ್ಸ್ ದಂಪತಿ 10.5 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.

ದಕ್ಷಿಣ ಫ್ರಾನ್ಸ್ ನಲ್ಲಿ ವಿಲಿಯಮ್ಸ್ ಹಾಗೂ ಕೇಟ್ ರಜೆ ಕಳೆಯಲು ತೆರಳಿದ್ದ ಸಂದರ್ಭದಲ್ಲಿ ಅರೆನಗ್ನ ಫೋಟೋಗಳನ್ನು ತೆಗೆಯಲಾಗಿತ್ತು. ಇಬ್ಬರು ಫೋಟೋಗ್ರಾಫರ್ ಗಳು ದಂಪತಿಯ ಫೋಟೋ ಸೆರೆಹಿಡಿದಿರುವ ಬಗ್ಗೆ ಪುರಾವೆಗಳು ಕೂಡ ಸಿಕ್ಕಿವೆ. ಲಾ ಪ್ರೊವೆನ್ಸ್ ಪತ್ರಿಕೆಯ ಛಾಯಾಗ್ರಾಹಕನೊಬ್ಬ ಕೇಟ್, ಬಿಕಿನಿಯಲ್ಲಿದ್ದ ಫೋಟೋವನ್ನು ಕೂಡ ಸೆರೆಹಿಡಿದಿದ್ದ.

ಟಾಪ್ ಲೆಸ್ ಫೋಟೋಗಳನ್ನು ಮರು ಮುದ್ರಣ ಮಾಡದಂತೆ ಮತ್ತು ಪ್ರಕಟಿಸದಂತೆ ಫ್ರಾನ್ಸ್ ಅಧಿಕಾರಿಗಳು ನಿರ್ಬಂಧಿಸಿದ್ದರು. ನಿರ್ಬಂಧದ ಹೊರತಾಗಿಯೂ ಹಲವು ಪತ್ರಿಕೆಗಳಲ್ಲಿ ಕೇಟ್ ಮಿಡ್ಲಟನ್ ಅವರ ಟಾಪ್ ಲೆಸ್ ಫೋಟೋಗಳು ಪ್ರಕಟವಾಗಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...