alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಬ್ಲಾಸ್ಟ್

ಲಂಡನ್ ನ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಅಂಡರ್ ಗ್ರೌಂಡ್ ನಲ್ಲಿರೋ ಮೆಟ್ರೋ ನಿಲ್ದಾಣಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಯುತ್ತಿದೆ. ವೆಸ್ಟ್ ಲಂಡನ್ ನಲ್ಲಿರೋ ನಿಲ್ದಾಣಕ್ಕೆ 6 ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಹಾಗೂ ಹೆಲಿಕಾಪ್ಟರ್ ಒಂದನ್ನು ಕೂಡ ಕರೆಸಿಕೊಳ್ಳಲಾಗಿದೆ.

ನಿಲ್ದಾಣದ ಹೊರಗೆ ಗಾಯಾಳು ಮಹಿಳೆಯೊಬ್ಬಳು ಕುಳಿತಿದ್ಲು. ಶಸ್ತ್ರಾಸ್ತ್ರ ಸಹಿತ ಪೊಲೀಸರು ನಿಲ್ದಾಣವನ್ನು ಸುತ್ತುವರಿದಿದ್ದಾರೆ. ಮಹಿಳೆಯ ಕಾಲಿಗೆ ತೀವ್ರ ಗಾಯವಾಗಿದ್ದು, ಆಕೆಯನ್ನು ಸ್ಟ್ರೆಚರ್ ನಲ್ಲಿ ಕರೆತರಲಾಗಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದಷ್ಟೇ ಲಂಡನ್ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಘಟನೆಯ ಸಂಪೂರ್ಣ ವಿವರ ಇನ್ನೂ ಲಭ್ಯವಾಗಿಲ್ಲ. ರೈಲಿನಲ್ಲೇ ಬಾಂಬ್ ಸ್ಫೋಟಿಸಲಾಗಿದೆ ಅಂತಾ ಹೇಳಲಾಗ್ತಿದ್ದು, ಘಟನೆ ಬಳಿಕ ಅರ್ಲ್ಸ್ ಕೋರ್ಟ್ ಮತ್ತು ವಿಂಬಲ್ಡನ್ ಕಡೆಗೆ ತೆರಳುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ವರ್ಷ ಬ್ರಿಟನ್ ನಲ್ಲಿ ನಾಲ್ಕು ಬಾರಿ ಉಗ್ರರ ದಾಳಿ ನಡೆದಿದ್ದು, 36 ಜನರು ಮೃತಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...