alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಈ ಸಚಿವ

ಬ್ರಿಟನ್ ನ ಸಚಿವರೊಬ್ಬರು ನಾಟಕೀಯ ಸನ್ನಿವೇಶದಲ್ಲಿ ರಾಜೀನಾಮೆ ನೀಡಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಲು ತಾವು ಲಭ್ಯವಿರಲಿಲ್ಲ, ನಿಜಕ್ಕೂ ಇದು ನಾಚಿಕೆಗೇಡು ಎಂದ ಸಚಿವ ಲಾರ್ಡ್ ಮೈಖೆಲ್ ಬೇಟ್ಸ್, ರಾಜೀನಾಮೆ ಸಲ್ಲಿಸಿದ್ದಾರೆ. ಆದ್ರೆ ಅವರ ಪದತ್ಯಾಗ ಅಂಗೀಕಾರವಾಗಿಲ್ಲ.

ಬೇಟ್ಸ್, ಅಂತರಾಷ್ಟ್ರೀಯ ಅಭಿವೃದ್ಧಿ ಇಲಾಖೆಯಲ್ಲಿ ಕಿರಿಯ ಸಚಿವರಾಗಿದ್ದಾರೆ. ವಿರೋಧ ಪಕ್ಷ ಲೇಬರ್ ಪಾರ್ಟಿ ಸದಸ್ಯರೊಬ್ಬರು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದರು. ಆದ್ರೆ ಆ ಸಮಯದಲ್ಲಿ ಪ್ರಶ್ನೆಗೆ ಉತ್ತರಿಸಲು ಬೇಟ್ಸ್ ಸದನದಲ್ಲಿರಲಿಲ್ಲ. ಕಲಾಪಕ್ಕೆ ತಡವಾಗಿ ಆಗಮಿಸಿದ್ದರು.

ಸದನಕ್ಕೆ ಸರಿಯಾದ ಸಮಯಕ್ಕೆ ಬಾರದೇ ಇರುವ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ ಬೇಟ್ಸ್, ಪ್ರತಿಪಕ್ಷದ ಸದಸ್ಯರ ಪ್ರಶ್ನೆಗೆ ಸರ್ಕಾರದ ಪರವಾಗಿ ಉತ್ತರಿಸುವುದ ನನ್ನ ಕರ್ತವ್ಯವಾಗಿತ್ತು. ಆದ್ರೆ ಅದನ್ನು ಸಮರ್ಥವಾಗಿ ನಿಭಾಯಿಸದೇ ಇರುವುದು ತಪ್ಪು ಅಂತಾ ಹೇಳಿದ್ರು.

ಅಷ್ಟೇ ಅಲ್ಲ ಈ ಕೂಡಲೇ ರಾಜೀನಾಮೆ ನೀಡುತ್ತಿರುವುದಾಗಿ ಸದನದಲ್ಲೇ ಪ್ರಕಟಿಸಿದ್ರು. ಬೇಟ್ಸ್ ನಿರ್ಧಾರವನ್ನು ಅವರ ಸಹೋದ್ಯೋಗಿಗಳು ವಿರೋಧಿಸಿದ್ರು. ಆದ್ರೆ ಸಚಿವರು ಮಾತ್ರ ತಮ್ಮ ರಾಜೀನಾಮೆ ಪತ್ರ ನೀಡಿ ಸದನದಿಂದ ಹೊರನಡೆದ್ರು. ಆದ್ರೆ ಸರ್ಕಾರ ಅವರ ರಾಜೀನಾಮೆಯನ್ನು ತಿರಸ್ಕರಿಸಿದೆ. ಸಚಿವರ ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...