alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಕೆಲವೇ ಗಂಟೆಗಳ ಮುನ್ನ ವರ ಮಾಡಿದ್ದೇನು?

rape

ಲಂಡನ್ ನಲ್ಲಿ ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಅಪರಿಚಿತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದನಿಗೆ ಜೀವಾವಧಿ ಶಿಕ್ಷೆಯಾಗಿದೆ. ಜನವರಿ 13ರಂದು 28 ವರ್ಷದ ಗೆರ್ರಿ ಮೆಕ್ಕನ್ ಎಂಬಾತನ ವಿವಾಹ ನಿಶ್ಚಯವಾಗಿತ್ತು. ಆತನ ಭಾವಿ ಪತ್ನಿ ಮದುವೆಗೂ ಮುನ್ನವೇ ಗರ್ಭಿಣಿ ಬೇರೆ.

ಮದುವೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿತ್ತು. ಗೆರ್ರಿ, ಪಾರ್ಕ್ ಒಂದರಲ್ಲಿ ಅಪರಿಚಿತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಅವಳ ಒಳಉಡುಪು ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ. ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿಲ್ಲ ಅಂತೆಲ್ಲಾ ಹೇಳಿ ಮೈಂಡ್ ಗೇಮ್ಸ್ ಕೂಡ ಶುರು ಮಾಡಿದ್ದ.

ಮಾರ್ಚ್ 2ರಂದು ಗೆರ್ರಿ ವಿರುದ್ಧದ ಆರೋಪ ಸಾಬೀತಾಗಿತ್ತು. ದೈಹಿಕ ದೌರ್ಜನ್ಯದ ಜೊತೆಗೆ ಆಕೆಗೆ ಮಾನಸಿಕ ಕಿರುಕುಳ ನೀಡಿ ಕ್ರೂರವಾಗಿ ಗೆರ್ರಿ ವರ್ತಿಸಿದ್ದಾನೆ ಅಂತಾ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿಂದೆ 2009ರಲ್ಲಿ ಕೂಡ ಇಂಥದ್ದೇ ಪ್ರಕರಣದಲ್ಲಿ ಗೆರ್ರಿಗೆ ಜೀವಾವಧಿ ಶಿಕ್ಷೆಯಾಗಿತ್ತು. 2015ರಲ್ಲಿ ಆತ ಜೈಲಿನಿಂದ ಬಿಡುಗಡೆಯಾಗಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...