alex Certify
ಕನ್ನಡ ದುನಿಯಾ       Mobile App
       

Kannada Duniya

ಊಟದಲ್ಲಿ ಸಿಕ್ತು ಜಿರಳೆ, ಹೋಟೆಲ್ ಗೆ ಬಿತ್ತು ಬೀಗ….

cocroach

ಲಂಡನ್ ನಲ್ಲಿರುವ ಇಂಡಿಯನ್ ರೆಸ್ಟೋರೆಂಟ್ ಒಂದ್ರಲ್ಲಿ ಊಟದಲ್ಲಿ ಜಿರಳೆ ಸಿಕ್ಕಿದೆ. ಗ್ರಾಹಕರು ಊಟವನ್ನು ಅರ್ಧದಲ್ಲೇ ಬಿಟ್ಟು ಎದ್ದು ಹೊರಟರೆ, ಸ್ಥಳಕ್ಕೆ ಬಂದ ಹೆಲ್ತ್ ಇನ್ಸ್ ಪೆಕ್ಟರ್ ತಕ್ಷಣವೇ ರೆಸ್ಟೋರೆಂಟ್ ಅನ್ನು ಬಂದ್ ಮಾಡಿಸಿದ್ದಾರೆ.

ಅಡುಗೆ ಮನೆಯಲ್ಲಿ ಸತ್ತ ಮತ್ತು ಜೀವಂತ ಜರ್ಮನ್ ಜಿರಳೆಗಳನ್ನು ಹೆಲ್ತ್ ಇನ್ಸ್ ಪೆಕ್ಟರ್ ಕೂಡ ಪತ್ತೆ ಮಾಡಿದ್ರು. ಫುಡ್ ಸ್ಟೋರ್ ಹಾಗೂ ಫ್ರೀಜರ್ ನಲ್ಲಿ ಜಿರಳೆಗಳಿದ್ವು. ಹಾಗಾಗಿ ಕೂಡಲೇ ಹೋಟೆಲ್ ಗೆ ಬೀಗ ಜಡಿಯಲಾಯ್ತು.

ಅಧಿಕಾರಿಗಳು ಪರಿಶೀಲನೆ ನಡೆಸಿ ರೆಸ್ಟೋರೆಂಟ್ ಸಂಪೂರ್ಣ ಸ್ವಚ್ಛತೆಯಿಂದ ಕೂಡಿದೆ ಎಂದು ಪ್ರಮಾಣಪತ್ರ ನೀಡುವವರೆಗೆ ಅದನ್ನು ತೆರೆಯಲು ಅವಕಾಶವಿಲ್ಲ. ಅಧಿಕಾರಿಗಳು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಮತ್ತೆ ಹೋಟೆಲ್ ಆರಂಭಿಸಬಹುದು. ಫೆಬ್ರವರಿ 8ರಿಂದ್ಲೂ ಲೈಸೆಸ್ಟರ್ ನ ರೆಸ್ಟೋರೆಂಟ್ ಗೆ ಬೀಗ ಜಡಿಯಲಾಗಿದೆ. ಗ್ರಾಹಕರಿಗೆ ಶುಚಿ-ರುಚಿಯಾದ ಆಹಾರ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಹೋಟೆಲ್ ಸಿಬ್ಬಂದಿ ಮುಚ್ಚಿದ ಬಾಗಿಲಿನ ಮೇಲೆ ನೋಟಿಸ್ ಒಂದನ್ನು ಅಂಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...