alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್‍ಗೆ ತೆರಳಿದ್ದ ಹೋಟೆಲ್‍ಗೆ ಈಗ ಅವರೇ ಮಾಲೀಕರು…!

ಯಾವುದಾದರೂ ಹೋಟೆಲ್‍ಗೆ ಹನಿಮೂನ್‍ಗೆ ತೆರಳಿದ ನವದಂಪತಿಗೆ ಆ ಹೋಟೆಲ್ ತುಂಬಾ ಇಷ್ಟವಾದರೆ ಹೆಚ್ಚೆಂದರೆ ಮುಂದಿನ ವರ್ಷವೂ ಇಲ್ಲಿಗೇ ಬರೋಣ ಎಂದು ನಿರ್ಧರಿಸಬಹುದು. ಆದರೆ ಇಲ್ಲೊಂದು ನವಜೋಡಿ ತಾವು ಹನಿಮೂನ್‍ಗೆ ತೆರಳಿದ್ದ ಹೋಟೆಲನ್ನೇ ತಮ್ಮದಾಗಿಸಿಕೊಂಡಿದೆ.

ಕಳೆದ ವರ್ಷದ ಜುಲೈನಲ್ಲಿ ಮದುವೆಯಾಗಿರುವ ಲಂಡನ್‍ನ ಜಿನಾ ಲಯೋನ್ಸ್ ಹಾಗೂ ಮಾರ್ಕ್ ಲೀ ದಂಪತಿ ಹನಿಮೂನ್‍ಗಾಗಿ ಶ್ರೀಲಂಕಾದಲ್ಲಿನ ಹೋಟೆಲ್ ಒಂದರಲ್ಲಿ ರೂಮ್ ಬುಕ್ ಮಾಡಿಸಿದ್ದರು.

ಅದರಂತೆ ಅಲ್ಲಿಗೆ ಮಧುಚಂದ್ರಕ್ಕೆ ಹೋಗಿದ್ದರು. ಹಾಗೆ ಆ ರಾತ್ರಿ ಅವರಿಬ್ಬರೂ ಮದ್ಯಪಾನ ಮಾಡುತ್ತ 12 ಗ್ಲಾಸ್ ರಮ್ ಕುಡಿದಿದ್ದರು. ಹೀಗೆ ಕುಡಿದ ಮತ್ತಿನಲ್ಲಿರುವಾಗಲೇ ಅವರಿಗೆ ತಾವಿದ್ದ ಹೋಟೆಲ್‍ನ ಲೀಸ್ ಅವಧಿ ಸದ್ಯದಲ್ಲೇ ಮುಗಿಯಲಿದೆ ಎಂಬುದು ತಿಳಿಯಿತು. ಹಾಗಾದರೆ ತಾವೇ ಯಾಕೆ ಈ ಹೋಟೆಲ್ ಗುತ್ತಿಗೆ ಪಡೆಯಬಾರದು ಎಂದು ಆ ದಂಪತಿಗೆ ಅನಿಸಿತ್ತಂತೆ.

ಬಳಿಕ 30 ಸಾವಿರ ಪೌಂಡ್ಸ್ ನೀಡಿ ಮೂರು ವರ್ಷಕ್ಕೆ ಹೋಟೆಲ್ ಗುತ್ತಿಗೆ ಪಡೆಯುವುದು. ಮೊದಲ ಕಂತಾಗಿ 15 ಸಾವಿರ ಪೌಂಡ್ಸ್ ನೀಡುತ್ತೇವೆ. ಉಳಿದದ್ದನ್ನು 2019ರ ಮಾರ್ಚ್‍ನಲ್ಲಿ ನೀಡುತ್ತೇವೆ ಎಂದು ಈ ಜೋಡಿ ಮಾತುಕತೆ ನಡೆಸಿದೆ. ಮಾತ್ರವಲ್ಲ ಈ ವರ್ಷದ ಜುಲೈ 1ರಿಂದ ಆ ಹೋಟೆಲ್‍ಗೆ ಅಧಿಕೃತವಾಗಿ ಮಾಲೀಕರೆನಿಸಿಕೊಂಡಿರುವ ಆ ನವದಂಪತಿ, ಹೋಟೆಲ್‍ಗೆ ಲಕ್ಕಿ ಬೀಚ್ ಟ್ಯಾಂಗೆಲ್ಲೆ ಎಂದು ಮರು ನಾಮಕರಣ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...