alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟಿಷ್ ಮೂಲದ ಪಾಕಿಗಳು ಫಸ್ಟ್ ನೈಟ್ ನಲ್ಲಿ ಏನ್ ಮಾಡ್ತಿದ್ರು ಗೊತ್ತಾ…?

ಪಾಕಿಸ್ತಾನಿ ಯುವತಿಯೊಬ್ಬಳು ಬ್ರಿಟಿಷ್ ಮೂಲದ ಪಾಕಿಸ್ತಾನಿಯನ್ನು ಮದುವೆಯಾದ ತನ್ನ ಭಯಾನಕ ಕಥೆಯನ್ನು ಬಹಿರಂಗ ಪಡಿಸಿದ್ದಾಳೆ.

ಪಾಕಿಸ್ತಾನಿ ಯುವತಿಯನ್ನು ಮದುವೆಯಾದ ಬ್ರಿಟಿಷ್ ಮೂಲದ ಪಾಕಿಸ್ತಾನದ ವ್ಯಕ್ತಿ ಅವರ ಫಸ್ಟ್ ನೈಟ್ ವಿಡಿಯೋವನ್ನು ಚಿತ್ರೀಕರಿಸಿ, ಬ್ಲಾಕ್ ಮೇಲ್ ಮಾಡಿದ್ದಾನೆ.

ಪಾಕಿಸ್ತಾನದ ಮೀರ್ ಪುರ್ ನಲ್ಲಿ ಇಂತಹ ಹಗರಣಗಳು ಆಗಾಗ ನಡೆಯುತ್ತಿವೆ. ಬ್ರಿಟಿಷ್ ಮೂಲದ ವ್ಯಕ್ತಿಯನ್ನ ಮದುವೆಯಾಗಲು ಒಪ್ಪಿದ ಯುವತಿಯರಿಗೆ ಒಳ್ಳೆಯ ಜೀವನ ನೀಡ್ತಿವೆ ಅಂತಾ ಹೇಳಿ ಮೋಸ ಮಾಡ್ತಿದ್ದಾರೆ ಅಂತಾ ದೂರಿದ್ದಾಳೆ.

ಇನ್ನು ಈ ಕುರಿತು ಮೀರ್ ಪುರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯುವತಿಯ ಪೋಷಕರು ಯುವತಿಯರನ್ನು ಮದುವೆಯಾಗಿ ಮೋಸ ಮಾಡುವ ಒಂದು ದೊಡ್ಡ ಜಾಲವೇ ಇದೆ ಅಂತಾ ತಿಳಿಸಿದ್ದಾರೆ.

ಈ ಜಾಲವನ್ನ ಬ್ರಿಟಿಷ್ ಮೂಲದ ಪಾಕಿಸ್ತಾನಿ ಮುಮ್ತಾಜ್ ಎಂಬಾತಾ ಮುನ್ನೆಡೆಸುತ್ತಿದ್ದಾನೆ. ಈತ ತಾಜಾಪೆಹಲ್ವಾನ್ ಅಂತನೂ ಗುರುತಿಸಿಕೊಂಡಿದ್ದಾನೆ. ಈತನ ನೇತೃತ್ವದಲ್ಲಿ ಈ ಗುಂಪು ಯುವತಿಯರನ್ನೇ ಟಾರ್ಗೆಟ್ ಮಾಡ್ತಿದೆ. ಅದ್ರಲ್ಲೂ ಮೀರ್ ಪುರದ ಯುವತಿಯರೇ ಇವರ ಮೊದಲ ಗುರಿ, ವಿದೇಶಕ್ಕೆ ಕರೆದೊಯ್ದು, ಒಳ್ಳೆ ಜೀವನ ಕೊಡ್ತಿವಿ ಅಂತಾ ನಂಬಿಸಿ ಮದುವೆಯಾಗಿ ಮೋಸ ಮಾಡ್ತಿದ್ದಾರೆ ಅಂತಾ ತಿಳಿಸಿದ್ದಾರೆ.

ಇದೂವರೆಗೂ ಸುಮಾರು 15ಕ್ಕೂ ಹೆಚ್ಚು ಯುವತಿಯರು ಇವರ ಜಾಲಕ್ಕೆ ಸಿಲುಕಿದ್ದಾರೆ. ಹುಡುಗಿಯರನ್ನು ಮದುವೆಯಾಗಿ, ಫಸ್ಟ್ ನೈಟ್ ನಲ್ಲಿ ಅವರ ಖಾಸಗಿತನದ ವಿಡಿಯೋ ಮಾಡಿ, ನಂತರ ಅದನ್ನ ಆನ್ ಲೈನ್ ನಲ್ಲಿ ಹರಿಬಿಡ್ತಿದ್ರು. ಇನ್ನು ಈ ಯುವತಿಯರು ಅವರಿಂದ ವಿಚ್ಚೇದನ ಕೇಳಿದ್ರೆ, ಅವರ ಮೇಲೆ ಸುಳ್ಳು ಆರೋಪ ಹೋರಿಸಿ ಕೇಸ್ ದಾಖಲಿಸುತ್ತಿದ್ರು.

ಹೀಗೆ ಈ ಜಾಲದ ಮುಖ್ಯಸ್ಥನಾದ ಮಮ್ತಾಜ್ ಎಂಬಾತ ಇದೂವರೆಗೂ ಏಳು ಯುವತಿಯರನ್ನ , ಅಂಝರ್ ಎಂಬಾತ 5 ಮಂದಿಯನ್ನ ಮೊಹಮ್ಮದ್ ಎಂಬಾತ ಮೂರು ಮಂದಿಯನ್ನ ಮದುವೆಯಾಗಿದ್ದಾರೆ. ಅಲ್ಲದೆ ಮಮ್ತಾಜ್ ಕುಟುಂಬದ ಮತ್ತಿಬ್ಬರು ಸದಸ್ಯರು ಕೂಡಾ ಈ ಸ್ಕ್ಯಾಮ್ ನಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...