alex Certify
ಕನ್ನಡ ದುನಿಯಾ       Mobile App
       

Kannada Duniya

15 ಮಂದಿಯ ಜೀವ ಉಳಿಯಲು ಕಾರಣವಾಯ್ತು ಬಾಲಕನ ಮೆಸೇಜ್

truck-in-england-genericಕೇವಲ 7 ವರ್ಷದ ಅಫ್ಘಾನ್ ಬಾಲಕನೊಬ್ಬ ತೋರಿದ ಸಮಯಪ್ರಜ್ಞೆಯಿಂದಾಗಿ 15 ಮಂದಿಯ ಜೀವ ಉಳಿದಂತಾಗಿದೆ. ತನಗೆ ಗೊತ್ತಿದ್ದ ಹರಕು ಮುರುಕು ಇಂಗ್ಲೀಷ್ ನಲ್ಲಿ ಈತ ಕಳುಹಿಸಿದ ಮೆಸೇಜ್ ತಲುಪಿದ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು 15 ಮಂದಿಯ ಪ್ರಾಣ ರಕ್ಷಿಸಿದ್ದಾರೆ.

ಅಫ್ಘಾನಿಸ್ತಾನದ ವಲಸೆಗಾರನ್ನು ಅಕ್ರಮವಾಗಿ ಟ್ರಕ್ ಒಂದರಲ್ಲಿ ಇಂಗ್ಲೆಂಡ್ ನಲ್ಲಿ ಸಾಗಿಸಲಾಗುತ್ತಿತ್ತು. 15 ಮಂದಿಯನ್ನು ಟ್ರಕ್ ಒಳಗೆ ಕೂರಿಸಿ ಬೀಗ ಹಾಕಲಾಗಿತ್ತು. ಇವರುಗಳ ಜೊತೆ 7 ವರ್ಷದ ಬಾಲಕನೂ ಇದ್ದ. ಗಾಳಿಯಾಡದೆ ಒಳಗಿದ್ದವರು ಉಸಿರುಗಟ್ಟತೊಡಗಿದ್ದರು. ಈ ಸಮಯದಲ್ಲಿ ನೆರವಿಗೆ ಬಂದಿದ್ದೇ ಬಾಲಕನ ಬಳಿ ಇದ್ದ ಸೆಲ್ ಫೋನ್. ಈ ಬಾಲಕ ವಲಸೆ ಶಿಬಿರದಲ್ಲಿದ್ದ ವೇಳೆ ಅಲ್ಲಿಗೆ ಭೇಟಿ ನೀಡಿದ್ದ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತೆಯೊಬ್ಬರು ಸೆಲ್ ಫೋನ್ ನೀಡಿ ಅಪಾಯದ ಸಂದರ್ಭಗಳಲ್ಲಿ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದರು.

ಇದನ್ನು ನೆನಪಿಸಿಕೊಂಡ ಬಾಲಕ, ಸೆಲ್ ಫೋನ್ ನಿಂದ ತನಗೆ ಗೊತ್ತಿದ್ದ ಹರಕುಮುರುಕು ಇಂಗ್ಲೀಷ್ ನಲ್ಲಿ “I ned halp darivar no stap car no oksijan in the car no signal iam in the cantenar. Iam no jokan valla.” (“I need help. The driver won’t stop the car. No oxygen in the car. No signal. I’m in a container. I am not joking. I swear to God.”)ಎಂದು ಬರೆದು ಅದನ್ನು ಸ್ವಯಂ ಸೇವಾ ಸಂಸ್ಥೆ ಕಾರ್ಯಕರ್ತೆಗೆ ಕಳುಹಿಸಿದ್ದ. ಕಾರ್ಯಕರ್ತೆ ಈ ಸಂದರ್ಭದಲ್ಲಿ ನ್ಯೂಯಾರ್ಕ್ ನಲ್ಲಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಲಂಡನ್ ನಲ್ಲಿದ್ದ ಸ್ನೇಹಿತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಕೆ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಬಾಲಕನ ಸೆಲ್ ಫೋನ್ ಲೊಕೇಶನ್ ಮೂಲಕ ಟ್ರಕ್ ಪತ್ತೆ ಹಚ್ಚಿ ಅಸ್ವಸ್ಥಗೊಂಡಿದ್ದ ನಿರಾಶ್ರಿತರನ್ನು ಕಾಪಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...