alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದಲ್ಲಿ ವಾಟ್ಸಾಪ್, ಫೇಸ್ಬುಕ್ ಬಳಸಲು ನೀಡಬೇಕು ತೆರಿಗೆ

ಉಗಾಂಡಾದಲ್ಲಿ ವಿವಾದಾತ್ಮಕ ಕಾನೂನು ಪಾಸ್ ಆಗಿದೆ. ಸಾಮಾಜಿಕ ಜಾಲತಾಣ ಬಳಸುವವರು ತೆರಿಗೆ ಕಟ್ಟುವ ಕಾನೂನು ಜಾರಿಗೆ ಬಂದಿದೆ. ಇನ್ಮುಂದೆ ಉಗಾಂಡಾ ನಾಗರೀಕರು ವಾಟ್ಸಾಪ್, ಫೇಸ್ಬುಕ್, ಟ್ವೀಟರ್ ನಂತಹ ಸಾಮಾಜಿಕ ಜಾಲತಾಣ ಬಳಸಲು ದಿನಕ್ಕೆ 3 ರೂಪಾಯಿ 36 ಪೈಸೆ ನೀಡಬೇಕು.

ಸಾಮಾಜಿಕ ಜಾಲತಾಣ ಬಳಕೆಯನ್ನು ದ್ವೇಷಿಸುವ ಉಗಾಂಡಾ ಅಧ್ಯಕ್ಷ ಯೊವೆರಿ ಮುಸೆವೇನಿ ಮಾರ್ಚ್ ನಲ್ಲಿಯೇ ಇದ್ರ ಕಾನೂನು ಬದಲಿಸುವುದಾಗಿ ಹೇಳಿದ್ದರು. ಸಾಮಾಜಿಕ ಜಾಲತಾಣದಿಂದ ಗಾಸಿಪ್ ಹಾಗೂ ಅನವಶ್ಯಕ ಮಾತುಕತೆ ಹೆಚ್ಚಾಗ್ತಿದೆ ಎಂದು ಅವ್ರು ಅಭಿಪ್ರಾಯಪಟ್ಟಿದ್ದರು. ಗಾಸಿಪ್ ಗೆ ಬ್ರೇಕ್ ಹಾಕಲು ಈ ನಿರ್ಧಾರ ಕೈಗೊಂಡಿರುವುದಾಗಿ ಯೊವೆರಿ ಹೇಳಿದ್ದಾರೆ.

ಜುಲೈ 1 ರಿಂದ ಈ ತೆರಿಗೆ ನೀತಿ ಜಾರಿಗೆ ಬರಲಿದೆ. ಉಗಾಂಡಾದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಸಾಮಾಜಿಕ ಜಾಲತಾಣ ಬಳಸ್ತಿದ್ದಾರೆ. ಮನಿ ಟ್ರಾನ್ಸ್ಫರ್  ಆ್ಯಪ್ ಗೆ ಶೇಕಡಾ 1 ರಷ್ಟು ತೆರಿಗೆ ನೀಡಬೇಕಾಗುತ್ತದೆ. ಈ ತೆರಿಗೆ ಪ್ರಮಾಣ ತುಂಬಾ ಕಡಿಮೆಯಿದ್ದು, ಜನರಿಗೆ ಇದ್ರಿಂದ ಹೊರೆ ಬೀಳುವುದಿಲ್ಲವೆಂದು ಯೊವೆರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...