alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್-ವಾಟ್ಸಾಪ್ ಬಳಕೆದಾರರು ಕಟ್ಟಬೇಕು ಟ್ಯಾಕ್ಸ್…!

ಸಾಮಾಜಿಕ ಜಾಲತಾಣಗಳು ಇಂದು ಬಲು ಜನಪ್ರಿಯತೆಯನ್ನು ಪಡೆದಿದ್ದು, ದಿನದಿಂದ ದಿನಕ್ಕೆ ಇದರ ಬಳಕೆದಾರರು ಹೆಚ್ಚಾಗುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹುಟ್ಟುಹಾಕುವ ಘಟನೆಗಳ ಮಧ್ಯೆಯೂ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಕಡಿಮೆಯಾಗಿಲ್ಲ.

ಅದರಲ್ಲೂ ಫೇಸ್ಬುಕ್, ವಾಟ್ಸಾಪ್, ಬಹುತೇಕರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಬಳಸಿಕೊಳ್ಳಲು ಮುಂದಾಗಿರುವ ಉಗಾಂಡಾ ಸರ್ಕಾರ, ತನ್ನ ದೇಶದ ಫೇಸ್ಬುಕ್, ವಾಟ್ಸಾಪ್, ವೈಬರ್ ಹಾಗೂ ಟ್ವಿಟರ್ ಬಳಕೆದಾರರ ಮೇಲೆ ಟ್ಯಾಕ್ಸ್ ಹೇರಲು ಮುಂದಾಗಿದೆ.

ಉಗಾಂಡದಲ್ಲಿ ಸುಮಾರು 23.6 ಮಿಲಿಯನ್ ಮೊಬೈಲ್ ಬಳಕೆದಾರರಿದ್ದು, ಈ ಪೈಕಿ 17 ಮಿಲಿಯನ್ ಮಂದಿ ಇಂಟರ್ನೆಟ್ ಬಳಸುತ್ತಾರಂತೆ. ಈ ಹದಿನೇಳು ಮಿಲಿಯನ್ ಇಂಟರ್ನೆಟ್ ಬಳಕೆದಾರರ ಪೈಕಿ ಎಷ್ಟು ಮಂದಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಮೊದಲಾದವುಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಸರ್ಕಾರ ಹೇಗೆ ಪತ್ತೆ ಹಚ್ಚಲಿದೆ ಎಂಬುದು ಕುತೂಹಲಕ್ಕೆಡೆಮಾಡಿದೆ.

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹುಸಿ ಸುದ್ದಿಗಳನ್ನು ಹಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇವುಗಳ ಬಳಕೆ ಮೇಲೆ ತೆರಿಗೆ ಹೇರಲು ಮುಂದಾಗಿರುವುದಾಗಿ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...